More

    1,412 ಬಿಡಾಡಿ ವಾಹನಗಳ ಜಪ್ತಿ ?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆಬದಿ ಹಲವು ದಿನಗಳ ಕಾಲ ವಾಹನ ನಿಲ್ಲಿಸಿ ಮೈಮರೆಯಬೇಡಿ. ಮರೆತರೆ ದಂಡ ಪಾವತಿ ಮಾಡಬೇಕಾಗುತ್ತದೆ, ಇಲ್ಲವಾದರೆ ಸಂಚಾರ ಪೊಲೀಸರು ಜಪ್ತಿ ಮಾಡಿ ಕೋರ್ಟ್ ಅನುಮತಿ ಪಡೆದು ಹರಾಜು ಕೂಗಲಿದ್ದಾರೆ.

    ನಗರದ ವಿವಿಧೆಡೆ ರಸ್ತೆಬದಿ, ುಟ್‌ಪಾತ್‌ನಲ್ಲಿ ನಿಲ್ಲಿಸುವ ವಾಹನಗಳಿಂದಾಗಿ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಬೇರೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ನಿಯಮ ಉಲ್ಲಂಸುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

    ನಗರದ 50 ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಡಾಡಿ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಲಾಗಿದ್ದು, 1,412 ವಾಹನಗಳನ್ನು ಗುರುತಿಸಲಾಗಿದೆ. ಇದರಲ್ಲಿ 521 ಬೈಕ್, 706 ಆಟೋ, 79 ನಾಲ್ಕು ಚಕ್ರದ ವಾಹನ, 6 ಭಾರಿ ವಾಹನಗಳು ಮತ್ತು 93 ಲಘು ಸರಕುಸಾಗಣೆ ವಾಹನಗಳಿವೆ.

    ಈ ವಾಹನಗಳ ಮಾಲೀಕರಿಗೆ ನೋಟಿಸ್ ಕೊಟ್ಟು ಅವರಿಂದ ದಂಡ ವಸೂಲಿ ಮಾಡಿ 918 ವಾಹನಗಳನ್ನು ವಿಲೇವಾರಿ ಮಾಡಲಾಗುತ್ತಿದೆ. 494 ವಾಹನಗಳು ಬಾಕಿ ಉಳಿದಿವೆ. ವಾರಸುದಾರರು ಪತ್ತೆಯಾಗದಿದ್ದಲ್ಲಿ ವಾಹನಗಳನ್ನು ವಶಕ್ಕೆ ಪಡೆದು ಕೋರ್ಟ್ ಅನುಮತಿ ಪಡೆದು ಸಾರ್ವಜನಿಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts