More

    ರಾಜ್ಯದ 18 ಜಿಲ್ಲೆಗಳಲ್ಲಿ ಶಾಖ ಅಲೆ ಮುಂದುವರಿಕೆ

    ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲು ಜನರಲ್ಲಿ ದಿಗಿಲು ಹುಟ್ಟಿಸಿದ್ದು, ಇನ್ನಷ್ಟು ದಿನಗಳ ಕಾಲ ಶಾಖ ಅಲೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೇ 4ರವರೆಗೂ ಹೀಟ್ ವೇವ್ ಬೀಸಲಿದೆ. ಈ ಸಮಯದಲ್ಲಿ ಮಧ್ಯಾಹ್ನ 12ರಿಂದ 3ರ ವರೆಗೆ ಸಾರ್ವಜನಿಕರು ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಡದಿರಲು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ರಾಜಧಾನಿಯಲ್ಲಿ ತಗ್ಗದ ಬಿಸಿಲ ತಾಪ:

    ಬೆಂಗಳೂರು ನಗರದಲ್ಲಿ ಬಿಸಿಲಿನ ಪ್ರತಾಪ ಮುಂದುವರಿದಿದೆ. ಕಳೆದ 2-3 ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರಿಂದ ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲು ಜನರನ್ನು ಹೈರಾಣರನ್ನಾಗಿಸಿದ್ದು ಮಕ್ಕಳು, ವೃದ್ಧರು ಸೇರಿದಂತೆ ಹೆಚ್ಚಿನ ಮಂದಿ ಪ್ರಖರ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡಿದ್ದಾರೆ. ಈ ಸಮಯದಲ್ಲಿ ವಾಹನ ಸಂಚಾರ ಕೂಡು ತುಸು ಕಡಿಮೆಯಾಗಿದ್ದು, ಕೆಲವೆಡೆ ಮಾತ್ರ ಹೆಚ್ಚು ಟ್ರಾಫಿಕ್ ಕಂಡುಬಂದಿದೆ. ಮಧ್ಯಾಹ್ನದ ವೇಳೆ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕೂರಿಸಿಕೊಂಡು ಹೆಚ್ಚು ದೂರ ಸಂಚಾರ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.

    ಮಂಗಳವಾರ ಗರಿಷ್ಠ ಉಷ್ಣಾಂಶದ ವಿವರ:
    ಜಿಲ್ಲೆಯ ಹೆಸರು ಡಿಗ್ರಿ ಸೆಲ್ಸಿಯಸ್
    ಕಲಬುರಗಿ 43.6
    ರಾಯಚೂರು 43.4
    ಕೊಪ್ಪಳ 42.7
    ವಿಜಯಪುರ 41.8
    ಬಾಗಲಕೋಟೆ 41.3
    ಗದಗ 41.2
    ದಾವಣಗೆರೆ 40.9
    ಹಾವೇರಿ 40.5
    ಧಾರವಾಡ 40.2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts