More

    ಜೀವನದಲ್ಲಿ ಅಂತಿಮ ಫಲ ಕೊಡುವ ಗ್ರಂಥ ಭಾಗವತ

    ಸುಗುಣೇಂದ್ರ ಶ್ರೀ ಆಶೀರ್ವಚನ — ರಾಜಾಂಗಣದಲ್ಲಿ ಪ್ರವಚನ ಸಪ್ತಾಹ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಜೀವನದಲ್ಲಿ ಉದ್ಧಾರದಾಯಕ ಅನೇಕ ಗ್ರಂಥಗಳಿದ್ದು, ಶ್ರೀಮದ್ಭಾಗವತವು ಬದುಕಿನ ಅಂತಿಮ ದಿನದಲ್ಲಿ ಇಚ್ಛಿತ ಫಲ ಕೊಡುವ ಮಹಾನ್​ ಗ್ರಂಥವಾಗಿದೆ. ಇದರ ಪಠಣೆಯಿಂದ ಜೀವನದಲ್ಲಿ ಸಂಪೂರ್ಣ ಸಾರ್ಥಕತೆ ಲಭಿಸುತ್ತದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

    ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ಸಾಯಂಕಾಲ ಆಯೋಜಿಸಿದ್ದ ಮೇ 6ರ ವರೆಗೆ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ನಡೆಸಿಕೊಡಲಿರುವ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟಿಸಿ ಆಶೀರ್ವಚನ ನೀಡಿದರು.

    ಮೋಕ್ಷದಾಯಕ ಗ್ರಂಥ

    ಚತುರ್ಥ ಪರ್ಯಾಯದ ಹಿನ್ನೆಲೆಯಲ್ಲಿ ಈಗಾಗಲೇ ಅಖಂಡ ಗೀತಾ ಪ್ರವಚನ ಮಾಲಿಕೆ ನಡೆಯುತ್ತಿದ್ದು, ಅದರೊಟ್ಟಿಗೆ ಭಾಗವತ ಸಪ್ತಾಹ ಎಂಬ ಹೊಸ ಪುಷ್ಪ ಅರ್ಚನೆ ಆಗುತ್ತಿದೆ. ಮಾಲೆಯಲ್ಲಿ ಒಂದೇ ಬಗೆಯ ಪುಷ್ಪ ಇದ್ದರೆ ನೋಡಲು ಚೆಂದವಲ್ಲ. ಬಗೆಬಗೆಯ ಪುಷ್ಪಗಳಿದ್ದರೆ ಆ ಮಾಲೆ ನೋಡಲು ಸುಂದರ, ಆಕರ್ಷಕವಾಗಿರುತ್ತದೆ. ಹೀಗಾಗಿ ಗೀತಾ ಪ್ರವಚನದೊಂದಿಗೆ ಭಾಗವತ ಪ್ರವಚನವೂ ನಡೆಯಲಿದ್ದು, ಇವೆರಡೂ ಸಹ ಮೋಕ್ಷದಾಯಕವಾದ ಮಹಾನ್​ ಗ್ರಂಥವಾಗಿದೆ ಎಂದರು.

    ಸುಶೀಂದ್ರ ತೀರ್ಥ ಶ್ರೀಪಾದರು, ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಹಿರಿಯರಾದ ಮುರಳೀಧರ ಆಚಾರ್ಯ, ಕಿರಿಯ ಶ್ರೀಗಳ ಕಾರ್ಯದರ್ಶಿ ಕೃಷ್ಣ ಇದ್ದರು.

    ಕಲಿಯ ಬಾಧೆ ನಿವಾರಣೆಯ ದಿವ್ಯೌಷಧ

    ಭಗವದ್ಗೀತೆಯ ನಂತರ ಬಂದ ಗ್ರಂಥ ಭಾಗವತ. ಮಹಾಭಾರತಾದಿ ಗೃಂಥ ರಚನೆಯಾದ ಬಳಿಕ ವೇದವ್ಯಾಸರಿಗೆ ಏನೋ ಬಿಟ್ಟು ಹೋಗಿದೆ ಎಂಬ ಭಾವನೆ ಬಂತು. ಹೀಗಾಗಿ ಇತರೆಲ್ಲ ಗ್ರಂಥಗಳಲ್ಲಿ ಅಲಭ್ಯವಾದ ಸಂದೇಶ ಇರುವ ಭಾಗವತದ ರಚನೆಯಾಯಿತು. ಇದರ ಪಠಣೆ, ಶ್ರವಣದಿಂದ ಅಪರಿಮಿತ ಪರಿಣಾಮ ಲಭಿಸುವುದಲ್ಲದೆ, ಅಮೃತದ ಫಲ ದಕ್ಕುತ್ತದೆ. ಕಲಿಯ ಬಾಧೆಯಿಂದ ಪಾರಾಗಲು ಭಾಗವತವು ದಿವ್ಯೌಷಧವಾಗಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts