More

    ರೇಷ್ಮೆ ಬೆಳೆಗಾರರು ಕಾದರೂ ಬಾರದ ಡಿಸಿಎಂ

    ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ ನಾರಾಯಣ್​ ರೇಷ್ಮೆ ಮಾರುಕಟ್ಟೆಗೆ ಬರ್ತಾರೆ. ಅವರ ಬಳಿ ತಮ್ಮ ಸಂಕಷ್ಟ ಹೇಳಿಕೊಳ್ಳಬೇಕು ಎಂದು ಸೋಮವಾರ ಕಾದು ಕುಳಿತ್ತಿದ್ದ ರೇಷ್ಮೆ ಬೆಳೆಗಾರರು ನಿರಾಸೆಯಿಂದಲೇ ವಹಿವಾಟು ಮುಂದುವರಿಸಿದರು.

    ಬೆಳಗ್ಗೆ ೧೦ಕ್ಕೆ ರೇಷ್ಮೆ ಮಾರುಕಟ್ಟೆಗೆ ಆಗಮಿಸಬೇಕಿತ್ತು. ಆದರೆ, ಪ್ರವಾಸಿ ಮಂದಿರದಲ್ಲೇ ಒಂದು ಗಂಟೆಗೂ ಹೆಚ್ಚು ಕಾಲ ಕುಳಿತ್ತಿದ್ದ ಸಚಿವರು, ಮಾರುಕಟ್ಟೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ವರದಿ ಪಡೆದುಕೊಂಡರು. ಬಸವನಪುರದಲ್ಲಿ ಮಾವಿನ ಮಂಡಿಗೂ ಭೇಟಿ ನೀಡಬೇಕಿದ್ದ ಸಚಿವರು ಅಲ್ಲಿಗೂ ಹೋಗಲಿಲ್ಲ. ರೇಷ್ಮೆ ಬೆಲೆ ಪಾತಾಳ ಸೇರಿ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಸಮಸ್ಯೆ ಬಗೆಹರಿಸಿ ಎಂದು ವಿನಮ್ರ ಮನವಿಗೆ ಬೆಳೆಗಾರರು ಸಜ್ಜಾಗಿದ್ದರು. ಇನ್ನೊಂದೆಡೆ ರೀಲರ್​ಗಳು ಕೂಡ ತಮ್ಮ ಅಳಲು‌ ತೋಡಿಕೊಳ್ಳಲು ಕಾಯುತ್ತಿದ್ದರು.

    ಇದನ್ನೂ ಓದಿ ಮುಂಬೈನಲ್ಲಿ ಪೂನಂ ಪಾಂಡೆ ಬಂಧನ!

    ಸೋಮವಾರ ಮಧ್ಯಾಹ್ನ ಸಿಎಂ ಅವರೊಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮಾಗಡಿ ಪ್ರವಾಸವನ್ನು ಸಚಿವರು ರದ್ದು ಪಡಿಸಿಕೊಂಡಿದ್ದರು. ಸೋಮವಾರ ಬೆಳಗ್ಗೆ ಪಡುವಣಗೆರೆಗೆ ಭೇಟಿ ನೀಡಿ ಇತ್ತೀಚೆಗೆ ಮೃತಪಟ್ಟಿದ್ದ ಪಡೆದ ಪತ್ರಕರ್ತ ಹನುಮಂತು ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಬಳಿಕ ನಿಗದಿ ಪಡಿಸಿದ್ದ ಎಲ್ಲ ಕಾರ್ಯಕ್ರ‌ಮವನ್ನೂ ರದ್ದು ಪಡಿಸಿ, ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿ ಬೆಂಗಳೂರಿನತ್ತ ಮುಖ ಮಾಡಿದರು.

    ಒಟ್ಟಿನಲ್ಲಿ ಕೋವಿಡ್ ಬಳಿಕ ಎರಡು ಭಾರಿ ಜಿಲ್ಲೆಗೆ ಆಗಮಿಸಿರುವ ಉಸ್ತುವಾರಿ ಸಚಿವರು, ಒಮ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅದಾದ ತಿಂಗಳ ಬಳಿಕ ಮತ್ತೊಮ್ಮೆ ಜಿಲ್ಲೆಗೆ ಬಂದು ಮತ್ತೊಂದು ಸಭೆ ನಡೆದಿರುವುದಷ್ಟೆ ಸಚಿವರ ಸಾಧನೆ ಎನ್ನಬಹುದು. ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ರೇಷ್ಮೆ ಸಚಿವ ನಾರಾಯಣಗೌಡ ಸಮಸ್ಯೆ ಆಲಿಸಿದ್ದಾರೆ.

    ಇದನ್ನೂ ಓದಿ ಸಾಮಾಜಿಕ ಅಂತರ ಮರೆತ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts