ನವದೆಹಲಿ: ರೈಲು ಅಪಘಾತ ತಡೆಗೆ ಸ್ವಯಂಚಾಲಿತ ರೈಲು ಭದ್ರತೆ (ಎಟಿಪಿ) ವ್ಯವಸ್ಥೆ ಕವಚ್ ಅಳವಡಿಕೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1,112.57 ಕೋಟಿಯನ್ನು ರೈಲ್ವೆ ಸಚಿವಾಲಯ ನಿಗದಿಪಡಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ಕುಳಿತಿದ್ದ ‘ಸ್ಪೈಡರ್ ಮ್ಯಾನ್’ನನ್ನು ಬಂಧಿಸಿದ ದೆಹಲಿ ಪೊಲೀಸರು!
ದೇಶದಲ್ಲಿ ರೈಲ್ವೆಗೆ ನೀಡಿರುವ ಅನುದಾನ ಮತ್ತು ಕವಚ್ ವ್ಯವಸ್ಥೆ ಅಳವಡಿಸಲು ಮಾಡಲಾದ ಮೀಸಲಿಟ್ಟ ಮತ್ತು ಬಳಸಿರುವ ಹಣದ ವಿವರಗಳ ಕುರಿತು ವಿವರ ನೀಡುವಂತೆ ಡಿಎಂಕೆ ಸಂಸದ ಕನಿಮೊಳಿ ಕರುಣಾನಿಧಿ ಮತ್ತು ರಾಣಿ ಶ್ರೀಕುಮಾರ್ ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗೆ ವೈಷ್ಣವ್ ಪ್ರತಿಕ್ರಿಯಿಸಿದ್ದಾರೆ.
“ಇದುವರೆಗೆ ಕವಚ್ ವ್ಯವಸ್ಥೆಗೆ 1,216.77 ಕೋಟಿ ರೂ. ವಿನಿಯೋಗಿಸಲಾಗಿದ್ದು, 2024-25ರ ಹಣಕಾಸು ವರ್ಷದಲ್ಲಿ 1,112.57 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ವೈಷ್ಣವ್ ತಿಳಿಸಿದರು.
ಸ್ವದೇಶಿ ನಿರ್ಮಿತ ಕವಚ್ ಎಂದರೆ ಸ್ವಯಂಚಾಲಿತ ರೈಲು ಭಧ್ರತೆ (ಎಟಿಪಿ) ವ್ಯವಸ್ಥೆಯಾಗಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ ಕೇಂದ್ರ ರೈಲ್ವೆ ಸಚಿವ ಹೇಳಿದ್ದಾರೆ.
ಒಂದೊಮ್ಮೆ ಲೋಕೋ ಪೈಲಟ್ ರೈಲನ್ನು ನಿಯಂತ್ರಿಸುವಲ್ಲಿ ವಿಫಲವಾದರೆ ಕವಚ್ ಸ್ವಯಂಚಾಲಿತ ವ್ಯವಸ್ಥೆ ಮೂಲಕ ಬ್ರೇಕ್ ಹಾಕಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ. ಮತ್ತು ಪ್ರತಿಕೂಲ ಹವಾಮಾನ ಸಂದರ್ಭ ರೈಲು ಸುರಕ್ಷಿತವಾಗಿ ಚಲಿಸಲು ಸಹಾಯ ಮಾಡುತ್ತದೆ” ಎಂದು ವಿಷ್ಣವ್ ಹೇಳಿದರು.
“ಕವಚ್ ಸ್ಥಾಪನಾ ಕೆಲಸವು ವಿವಿಧ ಹಂತದ ಪ್ರಕ್ರಿಯೆ ಹೊಂದಿದೆ. ಮೊದಲಿಗೆ ಪ್ರತಿ ನಿಲ್ದಾಣದಲ್ಲಿ ಸ್ಟೇಷನ್ ಕವಚ್ ಅಳವಡಿಸುವುದು, ಟ್ರ್ಯಾಕ್ ಉದ್ದದ ಉದ್ದಕ್ಕೂ RFID ಟ್ಯಾಗ್‌ಗಳ ಅಳವಡಿಸಬೇಕು. ಎಲ್ಲಾ ವಿಭಾಗಗಳಲ್ಲಿ ಟೆಲಿಕಾಂ ಟವರ್‌ಗಳ ಅಳವಡಿಸಬೇಕು. ಮತ್ತು ಹಳಿಗಳ ಪಕ್ಕದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಬೇಕು ಎಂದಿದ್ದಾರೆ.
ಈವರೆಗೆ ದೇಶದ 1,465 ಕಿ.ಮೀ ರೈಲು ಮಾರ್ಗದಲ್ಲಿ ಕವಚ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಮಧ್ಯ ರೈಲ್ವೆಯಲ್ಲಿ 144 ಇಂಜಿನ್‌ಗಳಲ್ಲಿ ಕವಚವನ್ನು ನಿಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ದೆಹಲಿಯಲ್ಲಿ ವೈಎಸ್ ಜಗನ್ ಪ್ರತಿಭಟನೆಗೆ ‘ಇಂಡಿಯಾ’ ಮೈತ್ರಿಕೂಟ ನಾಯಕರ ಬೆಂಬಲ: ‘ಡ್ರಾಮ’ ಎಂದ ಟಿಡಿಪಿ