

ನವದೆಹಲಿ: ರಾಜಸ್ಥಾನದ ರಾಜಕೀಯ ಬೆಳವಣಿಗೆಗಳು ದೇಶದ ಗಮನ ಸೆಳೆದಿವೆ. ಸುಮಾರು ವಾರದಿಂದಲೂ ಅಲ್ಲಿ ಭಿನ್ನಾಭಿಪ್ರಾಯಗಳು ಎದ್ದು, ಇದೀಗ ರೆಬಲ್ ಸಚಿನ್ ಪೈಲಟ್ ಅವರು ದೆಹಲಿಗೆ ಹೋಗಿ ಕುಳಿತಿದ್ದಾರೆ.
ಇಷ್ಟೆಲ್ಲ ಆದರೂ ಒಂದೂ ಮಾತನಾಡದಿದ್ದ ರಾಹುಲ್ ಗಾಂಧಿಯವರು ಇಂದು ಒಂದು ಟ್ವೀಟ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಭಾರತೀಯ ಮಾಧ್ಯಮಗಳ ಬಗ್ಗೆ ನೇರವಾದ ಆರೋಪ ಮಾಡಿದ್ದಾರೆ.
ಇಂದು ಭಾರತದ ಹಲವು ಮಾಧ್ಯಮಗಳು ನಿರಂಕುಶ ಪ್ರಭುತ್ವದ ಹಿಡಿತಕ್ಕೆ ಸಿಲುಕಿವೆ. ದ್ವೇಷ, ಸುಳ್ಳುಗಳನ್ನೇ ತುಂಬಿಕೊಂಡ ವಿವರಣೆಗಳನ್ನು ನ್ಯೂಸ್ ಚಾನೆಲ್ಗಳು ಜನರೆದುರು ತೆರೆದಿಡುತ್ತಿವೆ. ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದನ್ನೂ ಓದಿ: ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್!
ಹಾಗಾಗಿ ನಾನು ಸ್ವತಃ ವಿಡಿಯೋದ ಮೂಲಕ ಸತ್ಯಗಳನ್ನು ನಾಳೆಯಿಂದ ತಿಳಿಸಲಿದ್ದೇನೆ. ಈಗ ಏನು ನಡೆಯುತ್ತಿದೆ? ಹಿಂದೇನಾಗಿತ್ತು ಎಂಬುದರ ಬಗ್ಗೆ ನನ್ನ ವಿಚಾರಧಾರೆಗಳನ್ನು ನಾಳೆಯಿಂದ ಸ್ಪಷ್ಟವಾಗಿ ವಿಡಿಯೋದ ಮೂಲಕ ಹೇಳುತ್ತೇನೆ ಎಂದಿದ್ದಾರೆ.
ತಿಂಗಳ ಹಿಂದಷ್ಟೇ ರಾಹುಲ್ ಗಾಂಧಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಾಲ್ವರು ನರ್ಸ್ಗಳ ಬಳಿ ಸಂವಾದ ನಡೆಸಿದ್ದರು. ಕರೊನಾ ಸಮಯದಲ್ಲಿ ಆರೋಗ್ಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಚರ್ಚೆ ನಡೆಸಿದ್ದರು.(ಏಜೆನ್ಸೀಸ್)