ಈಕೆಗೆ ಬ್ರೆಡ್​ ತಯಾರಿಸಲು ಬೇಕು ಮಹಿಳೆಯರ ಮೂತ್ರ...; ಸಾರ್ವಜನಿಕ ಶೌಚಗೃಹಗಳ ಕಾಯಂ ಗಿರಾಕಿ ಇವಳು

Bread
Published on

ಪ್ಯಾರಿಸ್: ಇತ್ತೀಚೆಗಷ್ಟೇ ವ್ಯಕ್ತಿಯೋರ್ವ ನಾನು ಬಿಯರ್​ ಕಂಪನಿಯೊಂದರ ಉದ್ಯೋಗಿ. ಪ್ರತಿದಿನ ಅದರಲ್ಲಿ ನನ್ನ ಮೂತ್ರ ಸೇರಿಸುತ್ತಿದ್ದೆ ಎಂದು ಹೇಳಿದ್ದ. ಆಮೇಲೆ ಅದು ಸುಳ್ಳು ಎಂಬುದು ಗೊತ್ತಾಗಿತ್ತು.

ಆದರೆ ಇಲ್ಲೊಬ್ಬಳು ಬೇಕರಿ ನಡೆಸುವವಳು ಒಂದು ಭಯಾನಕ ಸತ್ಯ ಬಿಚ್ಚಿಟ್ಟಿದ್ದಾಳೆ. ತಾನು ಬ್ರೆಡ್​ ತಯಾರಿಸಲು ಮಹಿಳೆಯರ ಮೂತ್ರ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.

ಇದು ಕೇಳಲು ಅಸಹ್ಯ ಎನ್ನಿಸಿದರೂ ಸತ್ಯ. ಲೂಯಿಸ್ ರಾಗೆಟ್​ ಎಂಬುವಳು ಈ ಶಾಕಿಂಗ್​ ವಿಚಾರ ಹೇಳಿದ್ದಾರೆ. ಈಕೆ ಇಂಜಿನಿಯರ್​ ಮತ್ತು ಪರಿಸರ ಸ್ತ್ರೀವಾದಿ. ಈಕೆ ಗೋಲ್ಡಿಲಾಕ್ಸ್​ ಬ್ರೆಡ್​ನ್ನು ಬೇಯಿಸಿ, ಸಿದ್ಧಪಡಿಸಿಕೊಳ್ಳಲು ಮಹಿಳೆಯರ ಸಾರ್ವಜನಿಕ ಶೌಚಗೃಹದಿಂದ ಮೂತ್ರವನ್ನು ಸಂಗ್ರಹಿಸುತ್ತಾರಂತೆ. ಅದನ್ನು ಬ್ರೆಡ್​ಗೆ ಬಳಸುವ ಮೊದಲು ಸುಮಾರು 20 ಬಾರಿ ಸಂಸ್ಕರಿಸಿ, ನಿಸ್ಸಾರಗೊಳಿಸುತ್ತಾರಂತೆ.

ಮೂತ್ರವನ್ನು ಅತ್ಯಂತ ಪ್ರಬಲ ರಸಗೊಬ್ಬರ ಎಂದು ಕರೆದಿರುವ ಲೂಯಿಸ್​, ಮಾನವರ ತ್ಯಾಜ್ಯದ ಬಗೆ ಇರುವ ನಿಷೇಧವನ್ನು, ಅಸಹ್ಯದ ಮನೋಭಾವನೆಯನ್ನು ಹೋಗಲಾಡಿಸುವುದು ಮತ್ತು ಒಂದು ಸುಸ್ಥಿರ ಆಹಾರ ಚಕ್ರವನ್ನು ಉತ್ತೇಜಿಸುವುದು ನನ್ನ ಉದ್ದೇಶ. ಅದಕ್ಕಾಗಿ ನಾನೇ ಸ್ವತಃ ಈ ಪ್ರಯೋಗಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಇವರೆಲ್ಲಾ ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ? ಮೀರಾ ಮಿಥುನ್​ ಪ್ರಶ್ನೆ

ಮೂತ್ರವೊಂದು ತ್ಯಾಜ್ಯ ಎಂದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಇದೂ ಕೂಡ ಚಿನ್ನದಷ್ಟೇ ಬೆಲೆ ಹೊಂದಿದೆ. ಯುರಿನ್​​ನಲ್ಲಿ ನ್ಯೂಟ್ರಿಜೆನ್​, ಪೊಟ್ಯಾಷಿಯಂ ಸೇರಿ ಹಲವು ರೀತಿಯ ಪೌಷ್ಟಿಕಾಂಶಗಳು ಇರುತ್ತವೆ ಎಂದಿದ್ದಾರೆ. ಆದರೆ ಈ ಮಹಿಳೆ ಬೇಕರಿ ನಡೆಸುತ್ತಿದ್ದಾರೋ..ಅಥವಾ ತಾವು ತಿನ್ನುವ ಬ್ರೆಡ್​​ನ್ನು ಮೂತ್ರ ಹಾಕಿ ಬೇಯಿಸಿಕೊಳ್ಳುತ್ತಿದ್ದಾರೋ ಎಂದು ಸ್ಪಷ್ಟವಾಗಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net