

ಮಂಡ್ಯ: ಬಿಜೆಪಿ ಸರ್ಕಾರ ಎರಡು ಭಾರತವನ್ನು ಸೃಷ್ಟಿ ಮಾಡಿದೆ ಒಂದು ಭಾರತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡ್ತಿದೆ. ಮತ್ತೊಂದು ಭಾರತದ ಬಳಿ ಬೇಕಾದಷ್ಟು ಹಣವಿದೆ. ಅದಕ್ಕೆ ಬೇಕಾದ ಶಕ್ತಿಯನ್ನು ಸಿದ್ದಪಡಿಸುತ್ತಿದೆ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಸಾಧ್ಯವಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ನಮಗೆ ದ್ವೇಷ, ವಿಷ ಬೀಜ ಭಿತ್ತನೆ ಭಿತ್ತುವ ಭಾರತ ಬೇಕಿಲ್ಲ. ನಮ್ಮ ದೇಶದ ಯುವಕರು ನಿರುದ್ಯೋಗದಿಂದ ಇರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂದು ಕೋಟ್ಯಂತರ ಜನರು ನಮ್ಮ ಜತೆಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ದಲಿತರ ಸರ್ಕಾರಗಳು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಾಗಮೋಹನ್ ದಾಸ್ ಕಮಿಟಿ ರಚನೆ ಮಾಡಿತ್ತು. ಎಸ್ಸಿಎಸ್ಟಿಗೆ ಮೀಸಲಾತಿಯನ್ನು 3 ರಿಂದ 7 ಮಾಡ್ತೀವಿ ಅಂತಾ ಹೇಳಿದ್ದೆವು. ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ 15 ರಿಂದ 17 ಪರ್ಸೆಂಟ್ ಮಾಡಬೇಕು ಎಂದು ಹೇಳಿದೆ. ಆದರೆ ಮೂರವರೆ ವರ್ಷ ಆದರೂ ಬಿಜೆಪಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತಕ್ಷಣವೇ ವಿಧಾನಸಭೆ ಕರೆದು ನಾಗಮೋಹನ್ ದಾಸ್ ವರದಿ ಜಾರಿ ಮಾಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ರಾಹುಲ್ ಗಾಂಧಿ ಆಗ್ರಹಿಸಿದರು.