ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇದೀಗ ತುಂಬಾ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ವೆಸ್ಟ್ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಸಾಧಿಸಿದ ಗೆಲುವು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. 2007ರಲ್ಲಿ ಟಿ20 ಮಾದರಿಯಲ್ಲಿ ವಿಶ್ವಕಪ್ ಟೂರ್ನಿ ಆರಂಭವಾದ ವರ್ಷ ಭಾರತ ಚಾಂಪಿಯನ್ ಆಯಿತು. ಧೋನಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಗೆದ್ದು ವಿಶ್ವ ಚಾಂಪಿಯನ್ ಆಯಿತು. ಇದಾದ 17 ವರ್ಷಗಳ ಬಳಿಕ ಮತ್ತೆ ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿದೆ.
ಜೂನ್ 29ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತವಾಗಿ ಆಡಿದರು. ಆರಂಭದಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ತಮ್ಮ ಅನುಭವದಿಂದ ಕೊಹ್ಲಿ ನೆರವಾದರು. 59 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತಂಡವು ಸಂಕಷ್ಟದಲ್ಲಿದ್ದಾಗ ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಜತೆ ಕೊಹ್ಲಿ ಅತ್ಯುತ್ತಮ ಜತೆಯಾಟವಾಡಿದರು.
ಕೊಹ್ಲಿ ಆಡಿದ ಇನ್ನಿಂಗ್ಸ್ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣವಾಯಿತು. ಕೊಹ್ಲಿ ಅವರ ಶ್ರಮಕ್ಕೆ ಬೌಲರ್‌ಗಳು ಕೂಡ ಉತ್ತಮ ಬೆಂಬಲ ನೀಡಿದ್ದರಿಂದ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಟಿ20 ವಿಶ್ವಕಪ್ ಅನ್ನು ಅತ್ಯಂತ ಸಂತೋಷದಿಂದ ಎತ್ತಿದರು. ಟಿ20 ವಿಶ್ವಕಪ್ ಗೆದ್ದ ಕೊಹ್ಲಿಗೆ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತೊಂದು ಟಾರ್ಗೆಟ್ ನೀಡಿದ್ದಾರೆ.
ದ್ರಾವಿಡ್ ನೀಡಿದ ಟಾರ್ಗೆಟ್ ಏನೆಂದರೆ, ವೈಟ್ ಬಾಲ್ ಕ್ರಿಕೆಟ್ನಲ್ಲಿ ಕೊಹ್ಲಿ ಈಗಾಗಲೇ ಎಲ್ಲ ಕಪ್ ಸಾಧನೆ ಮಾಡಿದ್ದಾರೆ. ಆದರೆ, ರೆಡ್ ಬಾಲ್ ಕ್ರಿಕೆಟ್ನಲ್ಲಿ ಕೊಹ್ಲಿ ಇನ್ನೂ ಒಂದು ಕಪ್ ಸಾಧಿಸಬೇಕಿದೆ. ಈ ವಿಷಯವನ್ನು ಸ್ವತಃ ಕೊಹ್ಲಿ ಬಳಿಯೇ ದ್ರಾವಿಡ್ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅಂಡರ್-19 ವಿಶ್ವಕಪ್ ಗೆದ್ದಿದ್ದಾರೆ. ಆಗ ಅವರು ಕ್ಯಾಪ್ಟನ್ ಆಗಿದ್ದರು. 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಹಾಗೂ ಈಗ ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ತಂಡದ ಸದಸ್ಯರೂ ಆಗಿದ್ದರು. ಏಷ್ಯಾಕಪ್ ಕೂಡ ಗೆದ್ದಿದ್ದಾರೆ. ಇನ್ನು ಉಳಿದಿರುವುದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. 2021ಕ್ಕೂ ಮೊದಲು ವರ್ಷದ ಟೆಸ್ಟ್ ತಂಡದ ಪಾಯಿಂಟ್ ಪಟ್ಟಿಯಲ್ಲಿ ನಂಬರ್ ಒನ್ ಇರುವ ತಂಡಕ್ಕೆ ಟೆಸ್ಟ್ ಟ್ರೋಫಿಯನ್ನು ನೀಡಲಾಗುತ್ತಿತ್ತು. ಆದರೆ, ಆನಂತರ ವಿಶ್ವ ಟೆಸ್ಟ್ ಚಾಂಪಿಯನ್ಸ್ (ಡಬ್ಲ್ಯುಟಿಸಿ) ಹೆಸರಿನಲ್ಲಿ ಅಗ್ರ ಎರಡು ತಂಡಗಳ ನಡುವೆ ಫೈನಲ್ ನಡೆಸಲಾಗುತ್ತದೆ. 2021 ಮತ್ತು 2023ರಲ್ಲಿ, ಟೀಮ್ ಇಂಡಿಯಾ ಎರಡು ಬಾರಿ ಡಬ್ಲ್ಯುಸಿ ಫೈನಲ್ ಆಡಿತು. ಆದರೆ, 2021ರಲ್ಲಿ ನ್ಯೂಜಿಲೆಂಡ್ ಹಾಗೂ 2023ರಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಸೋಲು ಕಂಡಿತ್ತು. ಅಲ್ಲದೇ 2025ರಲ್ಲಿ ಡಬ್ಲ್ಯುಟಿಸಿ ಫೈನಲ್ ಆಡಿದರೆ ಕಪ್ ಗೆಲ್ಲುವಂತೆ ಕೊಹ್ಲಿಗೆ ದ್ರಾವಿಡ್ ಸಲಹೆ ನೀಡಿದ್ದಾರೆ.
Rahul Dravid to Virat Kohli:
"All three white ticked off, one red to go". 🥹❤️ pic.twitter.com/GJsKHe5zaf
— Mufaddal Vohra (@mufaddal_vohra) June 30, 2024
ಎಲ್ಲವನ್ನೂ ಸಾಧಿಸಿರುವ ಕೊಹ್ಲಿ, ದ್ರಾವಿಡ್ ನೀಡಿದ ಟಾರ್ಗೆಟ್ ಅನ್ನು ಪೂರ್ಣಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 2025ಕ್ಕೆ ಡಬ್ಲ್ಯುಟಿಸಿ ಫೈನಲ್ ಪಂದ್ಯ ನಡೆಯಲಿದೆ. (ಏಜೆನ್ಸೀಸ್)
ಅಹಂಕಾರ ತಲೆಗೆ ಏರಿದರೆ ಆ ದೇವರೇ ಕೆಳಗೆ ಬೀಳಿಸ್ತಾನೆ ನನಗೂ ಅದೇ ಆಗಿದ್ದು! ಕೊಹ್ಲಿ ಶಾಕಿಂಗ್ ಹೇಳಿಕೆ
ನಟ ವಿಜಯ್ಗೆ ಕೈ ತೆಗೆಯಿರಿ ಸರ್ ಎಂದ ವಿದ್ಯಾರ್ಥಿನಿ! ವಿಡಿಯೋ ವೈರಲ್, ಅಸಲಿ ಸಂಗತಿ ಇಲ್ಲಿದೆ…