ದಿಗ್ಗಜ ಸಚಿನ್ ತೆಂಡುಲ್ಕರ್ ಹಿಂದಿಕ್ಕಿದ ರಾಹುಲ್ ದ್ರಾವಿಡ್..!

dravid for web-1
Published on

ಬೆಂಗಳೂರು: ದಿಗ್ಗಜ ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್‌ನ ಸರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಕಮ್ಮಿ ಏನಿಲ್ಲ. ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದ ಆಟಗಾರ. ಕಳೆದ 50 ವರ್ಷಗಳಲ್ಲಿ ಭಾರತದ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾರು ಶ್ರೇಷ್ಠರು ಎಂಬ ಅಭಿಪ್ರಾಯಕ್ಕೆ ಜನ ರಾಹುಲ್ ದ್ರಾವಿಡ್‌ಗೆ ಮಣೆ ಹಾಕಿದ್ದಾರೆ. ವಿಸ್ಡನ್ ಇಂಡಿಯಾ ನಡೆಸಿದ ಮತದಾನದಲ್ಲಿ ರಾಹುಲ್ ಶೇಕಡ 52 ಮತ ಪಡೆದು ಈ ಗೌರವ ಒಲಿಸಿಕೊಂಡಿದ್ದಾರೆ.

ವಿಸ್ಡನ್ ಇಂಡಿಯಾ ಸಾಮಾಜಿಕ ಜಾಲತಾಣಗಳ ಮೂಲಕ ನಡೆಸಿದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಯಾರು

ಎಂಬ ಅಭಿಪ್ರಾಯಕ್ಕೆ ಅಭಿಮಾನಿಗಳು ದ್ರಾವಿಡ್‌ಗೆ ಮಣೆ ಹಾಕಿದ್ದಾರೆ. 11,400 ಅಭಿಮಾನಿಗಳು ದ್ರಾವಿಡ್ ಪರ ಮತ ಚಲಾಯಿಸಿದ್ದಾರೆ ಎಂದು ವಿಸ್ಡನ್ ಇಂಡಿಯಾ ಹೇಳಿಕೊಂಡಿದೆ. ಸಚಿನ್‌ಗಿಂತ ದ್ರಾವಿಡ್‌ಗೆ ಕೂದಲೆಳೆ ಅಂತರದಲ್ಲಿ ಮೇಲುಗೈ ಸಾಧಿಸಿದ್ದಾರೆ. 16 ಬ್ಯಾಟ್ಸ್‌ಮನ್‌ಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅಂತಿಮ ಸುತ್ತಿನಲ್ಲಿ ದ್ರಾವಿಡ್, ಸಚಿನ್, ಸುನೀಲ್ ಗಾವಸ್ಕರ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ದ್ರಾವಿಡ್ ಹಾಗೂ ಸಚಿನ್ ಇಬ್ಬರು ಶ್ರೇಷ್ಠರೆ, ದ್ರಾವಿಡ್ ಕಠಿಣ ಶ್ರಮವೇ ಸಚಿನ್ ಸಮವಾಗಿ ತಂದು ನಿಲ್ಲಿಸುತ್ತದೆ ಎಂದು ಹೇಳಿದ್ದರು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಇಬ್ಬರು ದಿಗ್ಗಜರು 10 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net