ಬೆಂಗಳೂರು: ಜಗತ್ತನ್ನು ನಕಲಿ ರಾಮಾಯಣಗಳು ವ್ಯಾಪಿಸಿದ್ದು, ವಾಲ್ಮೀಕಿ ರಾಮಾಯಣಕ್ಕೆ ವಿರೋಧ ಕೃತಿಗಳು ರಚನೆಯಾಗುತ್ತಿವೆ. ಇದು ಆದಿಕಾವ್ಯಕ್ಕೆ ಎಸಗುವ ಅಪಚಾರ. ರಾಮಾಯಣದ ಮೂಲ ರಚನೆ ಜನಮಾನಸದಲ್ಲಿ ಉಳಿಯಬೇಕೆಂಬ ದೃಷ್ಟಿಯಿಂದ ಭಾವರಾಮಾಯಣ ‘ರಾಮಾವತರಣ’ ಕೃತಿ ರಚಿಸಲಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.
ಶ್ರೀ ಭಾರತೀ ಪ್ರಕಾಶನ ಹಾಗೂ ಸಾವಣ್ಣ ಪ್ರಕಾಶನ ಹೊಸಕೆರೆಹಳ್ಳಿಯ ಪಿ.ಇ.ಎಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭಾವರಾಮಾಯಣ ‘ರಾಮಾವತರಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಳ್ಳೆಯ ವಸ್ತುವಿನ ಅಲಭ್ಯ ಸಮಾಜಕ್ಕೆ ನಷ್ಟವನ್ನುಂಟು ಮಾಡುತ್ತದೆ. ಮೂಲ ತಿರುಳನ್ನು ವಿಸ್ತರಿಸಿದರೆ ಯಾವುದೇ ಲೋಪವಿಲ್ಲ. ಆದರೆ, ಇಂದು ರಚನೆಯಾಗುತ್ತಿರುವ ರಾಮಾಯಣ ಕೃತಿಗಳಿಂದ ವಾಲ್ಮೀಕಿ ರಾಮಾಯಣದ ಕಥೆ ಏನೆಂಬುದೇ ಸಮಾಜಕ್ಕೆ ತಿಳಿಯದಂತಾಗಿದೆ. ರಾಮಾಯಣದಲ್ಲಿಲ್ಲದ ಎಷ್ಟೋ ಸಂಗತಿಗಳು ಪ್ರಚಲಿತದಲ್ಲಿವೆ. ಅಂತಿಮವಾಗಿ ರಾಮಾಯಣದ ಭಾವ ಜನಮಾನಸದಿಂದ ದೂರವಾಗಬಾರದು ಎಂದರು.
ರಾಮಾಯಣ ಓದಿನ ವೇಳೆ ಸಿಗುವ ಸುಖದಿಂದ ಸಮಯ ಹೋಗುವುದು ಗೊತ್ತಾಗುವುದಿಲ್ಲ. ಇದರಲ್ಲಿ ಪ್ರಯತ್ನವಿಲ್ಲದೇ ಸಿಗುವ ಸುಖ ತುಂಬಿಕೊಂಡಿದೆ. ಮೂಲ ರಾಮಾಯಣದ ಓದು ಮನ@ಪರಿವರ್ತನೆಯತ್ತ ಕೊಂಡೊಯ್ಯುತ್ತದೆ. ಆದರ್ಶದ ಹಾದಿಯಲ್ಲಿ ರಚನೆಯಾಗಿರುವುದು ರಾಮಾಯಣದ ವಿಶೇಷತೆ.
ಅಂತರಂಗಕ್ಕೆ ಬೇಕಿರುವ ಶ್ರದ್ಧೆಯನ್ನು ರಾಮಾಯಣದಲ್ಲಿ ಗಮನಿಸಬಹುದು. ಅಯೋಧ್ಯೆ ನಿರ್ಮಾಣದ ಹಿಂದಿರುವುದು ಶ್ರದ್ಧೆ. ಕಟ್ಟಿರುವ ಕಟ್ಟಡದ ಬದಲು, ಹಣದ ಕಡೆ ಶ್ರದ್ಧೆ ಕೇಂದ್ರೀಕೃತವಾದರೆ ದುರ್ಟನೆಗಳೇ ಹೆಚ್ಚು. ಇಂದಿನ ದಿನಮಾನದಲ್ಲಿ ಮೂರೂ ಬಿಟ್ಟವನು ಊರಿಗೆ ದೊಡ್ಡವನು ಎಂಬಾತಾಗಿದೆ. ಶ್ರದ್ಧೆಯಂತೆ ಲಜ್ಜೆ ಕೂಡ ದೊಡ್ಡ ಗುಣ. ಲಜ್ಜೆ ಎಂಬ ಆಸ್ತಿ ನಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದರು.
ರಾಮಾಯಣ ಕೋಮಿನ ಗ್ರಂಥವಲ್ಲ!
ಎಷ್ಟು ಜನ ಬರೆದರೂ, ಹೇಳಿದರೂ ರಾಮಾಯಣ ಎಂಬುದು ಮುಗಿಯದ ವಿಸತ ಮಹಾಗ್ರಂಥ. ಪ್ರವಿಸ್ತಾರವಾದ ಕಥನವನ್ನು ವಾಲ್ಮೀಕಿ ಮಹರ್ಷಿ ಶ್ಲೋಕಗಳ ಮೂಲಕ ಚಿತ್ರಿಸಿದ್ದಾರೆ. ರಾಮಾಯಣ ಕೋಮಿನ ಗ್ರಂಥ ಎಂಬ ವಿಚಿತ್ರ ಪರಿಕಲ್ಪನೆ ಇದೆ. ರಾಮಾಯಣ ಜಾತಿಗಾಗಿ, ರ್ನಿದಿಷ್ಟ ವ್ಯಕ್ತಿಗಾಗಿ ನಿರ್ಮಾಣವಾದ ಗ್ರಂಥವಲ್ಲ. ಮಹಾಗ್ರಂಥವನ್ನು ಬೇಡರ ವೃತ್ತಿ ಮಾಡುತ್ತಿದ್ದ ವ್ಯಕ್ತಿ ತನ್ನ ಪೂರ್ವಜನ್ಮದ ಸಂಸ್ಕಾರದ ಹಿನ್ನಲೆಯಲ್ಲಿ ರಚಿಸಿ ಪ್ರಪಂಚಕ್ಕೆ ನೀಡಿದ್ದಾರೆ. ರಾಮಾಯಣ ‘ಕಲ್ಪನೆ’ ಎಂಬ ಮಾತು ಸಮಾಜದಲ್ಲಿದೆ. ಇದೊಂದು ಇತಿಹಾಸವಾಗಿದ್ದು, ನಡೆದ ಟನೆಗಳಿಗೆ ಸಾಕಷ್ಟು ಪುರಾವೆಗಳಿವೆ. ರಾಜಕೀಯ, ಪ್ರಜಾ ವತ್ಸುಲತೆ, ಆದರ್ಶ ಸಹೋದರತೆ, ಜಾತಿ ರಾಜಕಾರಣ ಹೇಗೆ ತೊರೆಯಬೇಕು ಎಂಬಿತ್ಯಾದಿಗಳ ಬಗ್ಗೆ ಗ್ರಂಥದಲ್ಲಿ ಕಾಣಬಹುದು. ರಾಮಾಯಣ ಜಾತಿ ಪ್ರಧಾನವನ್ನು ಬಿತ್ತಿಲ್ಲ. ಎಲ್ಲ ಸಮುದಾಯದ ವ್ಯಕ್ತಿಗಳ ವ್ಯಕ್ತಿತ್ವದ ವಿಕಾಸವನ್ನು ತೆರೆದಿಡುತ್ತದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ತಿಳಿಸಿದರು.
ಆಧುನಿಕ ಜಗತ್ತಿಗೆ ತಕ್ಕಂತೆ ಭಾವರಾಮಾಯಣ ‘ರಾಮಾವತರಣ’ ಕೃತಿ ರಚಿಸಲಾಗಿದೆ. ಪ್ರಸ್ತುತ ‘ಜಗನ್ನಾಯಕನ ಜಾತಕ’ ಹೆಸರಿನಲ್ಲಿ ರಾಮನ ಜಾತಕವನ್ನು ಆಧರಿಸಿ ಕೃತಿ ರಚಿಸುತ್ತಿದ್ದೇವೆ. ಮೂಲ ರಾಮಾಯಣದಲ್ಲಿ ರಾಮ ಹುಟ್ಟಿದಾಗ ಗ್ರಹಗತಿ ಏನಿತ್ತು ಎಂಬುದರ ಬಗ್ಗೆ ಮಾಹಿತಿಯಿದೆ. ಆ ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಗಳಿವೆ. ಇದನ್ನು ಸಮೀಕರಿಸಿ ಶಾಸಗಳು ಹೇಳುವುದು ರಾಮನ ಬದುಕಿನಲ್ಲಿ ಆಗಿವೆಯೋ ಎಂಬುದನ್ನು ತಿಳಿಸುವ ಉದ್ದೇಶವಿದೆ. ಮುಂದಿನ ಹಂತದಲ್ಲಿ ಅಜ್ಞಾತ ರಾಮಾಯಣ ಹಾಗೂ ತತ್ವ ರಾಮಾಯಣ ಬರೆಯಬೇಕೆಂದಿದ್ದೇವೆ.
– ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಶ್ರೀ ರಾಮಚಂದ್ರಾಪುರ ಮಠ
ನಿವೃತ್ತ ನ್ಯಾಯಮೂರ್ತಿ ವಿ.ಶಿವರಾಜ ಪಾಟೀಲ್, ಪಿಇಎಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಿ.ಸೂರ್ಯಪ್ರಸಾದ್ ಉಪಸ್ಥಿತರಿದ್ದರು. ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್.ರವಿಶಂಕರ್ ಶೀ ರಾಘವೇಶ್ವರ ಭಾರತಿ ಸ್ವಾಮಿಗಳೊಂದಿಗೆ ಕೃತಿಯ ಕುರಿತು ಸಂವಾದ ನಡೆಸಿದರು.
ವಿವಿಧ ಕ್ಷೇತ್ರಗಳ ನೂರಕ್ಕೂ ಅಧಿಕ ಗಣ್ಯರು ಭಾವರಾಮಾಯಣ ‘ರಾಮಾವತರಣ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಬಿಡುಗಡೆಗೂ ಮುನ್ನವೇ ಆರು ಮುದ್ರಣಗಳನ್ನು ಕಂಡಿದ್ದು, ಆರು ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ.