ರಾಧಿಕಾ ಅವರು 'happy 5th sweetheart' ಎಂಬ ಸಂದೇಶದ ಜೊತೆಗೆ ವಿಶೇಷ ಉಲ್ಲೇಖವನ್ನು ಯಶ್ ಅವರಿಗೆ ಹಂಚಿಕೊಂಡಿದ್ದಾರೆ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಅಪರೂಪಕ್ಕೆ ಫೋಟೋಗಳನ್ನು ಪೋಸ್ಟ್ ಮಾಡುವ ನಟ ಯಶ್, " ಜಗತ್ತು ಸುಂದರವಾಗಿದೆ ಎಂದು ಹೇಳುತ್ತಾರೆ. ಅದಕ್ಕೆ, ನಾನು ಸಂಪೂರ್ಣವಾಗಿ ಒಪ್ಪುತ್ತೇನೆ, ಆದರೆ ಅದು ನೀನು (ರಾಧಿಕಾ) ನನ್ನ ಪಕ್ಕದಲ್ಲಿರುವಾಗ ಮಾತ್ರ. ನನ್ನ ಜಗತ್ತನ್ನು ಸುಂದರವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಇದೀಗ, ರಾಧಿಕಾ ಮತ್ತು ಯಶ್ ಅವರು ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.