ಮುದ್ದೂರು ಶಾಲೆಯಲ್ಲಿ ರಾಧೆ ಕೃಷ್ಣ ಸ್ಪರ್ಧೆ

kon
Published on

ಕೊಕ್ಕರ್ಣೆ: ಮುದ್ದೂರು ವಿಎಸ್‌ಎಸ್ ಆಂಗ್ಲ ವಾಧ್ಯಮ ಶಾಲೆಯಲ್ಲಿ 1ರಿಂದ 7 ವಯೋಮಿತಿಯ ಮಕ್ಕಳ ರಾಧೆ ಕೃಷ್ಣ ಸ್ಪರ್ಧೆ ನಡೆಯಿತು. ಕುಂದಾಪರ, ಬ್ರಹ್ಮಾವರ, ಹೆಬ್ರಿ, ತಾಲೂಕಿನ 267 ಮಕ್ಕಳು ಭಾಗವಹಿಸಿದ್ದರು. ಕಜ್ಕೆ ಸಿದ್ದನಾಯ್ಕನಮನೆ ಶಾಲಾ ಮುಖ್ಯಶಿಕ್ಷಕಿ ಪಾರ್ವತಿ ವೈದ್ಯ ಉದ್ಘಾಟಿಸಿದರು.

1ರಿಂದ 3 ವರ್ಷದೊಳಗಿನ ಸ್ಪರ್ಧೆಯಲ್ಲಿ ಆಕೃತಿ ಎ.ಪೂಜಾರಿ ಪ್ರಥಮ, ಶ್ರೀದ ಕೆ.ಕಾಂಚನ್ ದ್ವಿತೀಯ, ಶಿವಾಂಶಿ ಜಿ.ಶೆಟ್ಟಿ ತೃತೀಯ, 4ರಿಂದ 5 ವರ್ಷದೊಳಗಿನ ಸ್ಪರ್ಧೆಯಲ್ಲಿ ಶ್ರಿಯಾ ಕೆ.ಕಾಂಚನ್ ಪ್ರಥಮ, ರಕ್ಷಾ ದ್ವಿತೀಯ, ವೈಶಾಲಿ ಶಾಸಿ ತೃತೀಯ, 6ರಿಂದ 7 ವರ್ಷದೊಳಗಿನ ಸ್ಪರ್ಧೆಯಲ್ಲಿ ಆರಾಧ್ಯಾ ಭಟ್ ಪ್ರಥಮ, ಅಗಮ್ಯ ಶೆಟ್ಟಿ ದ್ವಿತೀಯ, ಆರ್ಯ ತೃತೀಯ ಸ್ಥಾನ ಪಡೆದರು.

ಪ್ರತಿ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ 5,000, ದ್ವಿತೀಯ 3,000, ತೃತೀಯ 2,000 ರೂಪಾಯಿ ನಗದು ಬಹುವಾನ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಪ್ರತಾಪ್ ಹೆಗ್ಡೆ ವಾರಾಳಿ, ಶಾಲೆ ಆಡಳಿತಾಧಿಕಾರಿ ಹೆರಾಲ್ಡ್ ಬಿ.ಲೆವಿಸ್, ಪ್ರಾಂಶುಪಾಲರಾದ ಅಮಿತಾ ಶೆಟ್ಟಿ, ಭಾರತಿ, ಶಿಕ್ಷಕರು ಹಾಗೂ 9 ಮಂದಿ ತೀರ್ಪುಗಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net