ಶಂಕರನಾರಾಯಣ ಹೋಬಳಿ ರಚನೆಗೆ ಪ್ರಸ್ತಾಪ

Gururaj-2
Published on

ಕುಂದಾಪುರ: ತಾಲೂಕಿನ ಗ್ರಾಮೀಣ ಭಾಗವಾದ ಶಂಕರನಾರಾಯಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸರ್ಕಾರಿ ಕೆಲಸ ಕಾರ್ಯಗಳಿಗೆ 40 ಕಿ.ಮೀ. ದೂರದ ಹೋಬಳಿ ಕೇಂದ್ರಕ್ಕೆ ತೆರಳಬೇಕಾಗಿದೆ. ಶಂಕರನಾರಾಯಣ ಗ್ರಾಮ ಕೇಂದ್ರೀಕೃತವಾಗಿ ಶಂಕರನಾರಾಯಣ ಭಾಗದ ಗ್ರಾಮಗಳನ್ನು ಸೇರಿಸಿಕೊಂಡು ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಶಂಕರನಾರಾಯಣ ಹೋಬಳಿ ರಚನೆ ಬಗ್ಗೆ ಶಾಸಕ ಗುರುರಾಜ್ ಗಂಟಿಹೊಳೆ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

ಸದ್ಯ ಹೊಸ ಹೋಬಳಿ ರಚನೆ ಇಲ್ಲ: ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹೊಸದಾಗಿ ಹೋಬಳಿಗಳನ್ನು ರಚಿಸುವ ವಿಷಯ ಸರ್ಕಾರದ ಸಾಮಾನ್ಯ ನೀತಿಗೆ ಸಂಬಂಧಿಸಿದ್ದಾಗಿದೆ. ನೂತನ ಹೋಬಳಿಗಳು ರಚಿಸಬೇಕಾದರೆ ಭೌಗೋಳಿಕ, ಆಡಳಿತಾತ್ಮಕ ಅಗತ್ಯತೆ ಜತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ತುರ್ತಾಗಿ ರಾಜ್ಯದಲ್ಲಿ ಹೊಸದಾಗಿ ಹೋಬಳಿ ರಚಿಸಲು ಸರ್ಕಾರವು ಯಾವುದೇ ತಾತ್ವಿಕ ನಿರ್ಣಯ ಕೈಗೊಂಡಿದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಶಂಕರನಾರಾಯಣ ಹೋಬಳಿ ರಚನೆಯಾದರೆ ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಲಿದೆ. ಸರ್ಕಾರ ಇದನ್ನು ಆದ್ಯತೆ ಮೇರೆಗೆ ಮಾಡಬೇಕೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net