

ಹೆಬ್ರಿ: ವೃತ್ತಿ ಜೀವನವೆನ್ನುವುದು ನಿರಂತರವಾಗಿ ಹರಿಯುವ ನದಿಯಂತೆ, ಅದು ನಿಂತ ನೀರಾಗಬಾರದು. ಸವಾಜದ ಹಲವು ಮಜಲುಗಳಲ್ಲಿ ತನ್ನ ವೃತ್ತಿ ಜೀವನದ ಅನುಭವದ ಬುತ್ತಿಯನ್ನು ತೆರೆದು ವಿದ್ಯಾರ್ಥಿಗಳನ್ನೂ ಸೇರಿದಂತೆ ಸವಾಜದ ಸರ್ವೋನ್ನತಿಗೆ ಶ್ರಮಿಸಬೇಕೆಂದು ಹೆಬ್ರಿ ಉದ್ಯಮಿ ಯೋಗಿಶ್ ಭಟ್ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಯಾದ ಸಿಬ್ಬಂದಿಯನ್ನು ಸನ್ಮಾನಿಸಿ, ವಾತನಾಡಿದರು.
ಪ್ರೊ.ಮಂಜುನಾಥ್ ಎಂ. ವರ್ಗಾವಣೆಯಾದ ಸಿಬ್ಬಂದಿ ಬಗ್ಗೆ ಮಾತನಾಡಿದರು. ಈ ಹಿಂದೆ ಸೇವೆ ಸಲ್ಲಿಸಿದ ಕೆ.ಜಿ ಸುಧಾಕರ್, ಡಾ.ವಿಷ್ಣುಮೂರ್ತಿ ಪ್ರಭು, ಡಾ. ಗಣಪತಿ, ಆಶಾಲತಾ, ಅರುಣ್ ಶೆಟ್ಟಿ ವಾತನಾಡಿದರು.
ವರ್ಗಾವಣೆಗೊಂಡ ಪ್ರಾಧ್ಯಾಪಕರಾದ ಶಿಲ್ಪಾ ಬಿ.ಎಸ್, ಡಾ.ಪ್ರವೀಣ್ ಕುವಾರ್.ಎಸ್, ಪ್ರದೀಪ್ ಆನಂದ ಶೆಟ್ಟಿ, ವಿಜೇಂದ್ರ ಶೆಣೈ ಎಚ್, ಬಾಲರಾಜ್ ಡಿ.ಬಿ., ವ್ನಿೇಶ್ವರ ರಾವ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ರಾವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್, ಟಿ.ಜಿ.ಆಚಾರ್, ನರೇಂದ್ರ ನಾಯಕ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಜ್ಯೋತಿ ಸ್ವಾಗತಿಸಿ, ಅರುಣಾಚಲ ವಂದಿಸಿದರು. ಪ್ರವೀಣ್ ಶೆಟ್ಟಿ ನಿರೂಪಿಸಿದರು.