ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

kota (2)
Published on

ಕೋಟ: ಪೌಷ್ಟಿಕ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಇದು ಕೇವಲ ಒಂದು ದಿವಸಕ್ಕೆ ವಾತ್ರ ಸೀಮಿತವಾಗದೆ ಪ್ರತಿ ದಿವಸ ನಿಮ್ಮ ಅಡುಗೆಯಲ್ಲಿ ಬಳಕೆ ಆಗಬೇಕು. ನಮ್ಮ ಸುತ್ತಮುತ್ತ ಸಿಗುವಂತ ಆಹಾರ ಪದಾರ್ಥದಲ್ಲಿ ಪೌಷ್ಟಿಕಾಂಶ ಹೆಚ್ಚು ಇರುತ್ತದೆ ಅದನ್ನು ನಾವು ದಿನನಿತ್ಯ ಅಡುಗೆಯಲ್ಲಿ ಬಳಸಬೇಕು ನಮ್ಮ ಆಹಾರ ಹಿತವಾಗಿ ಮಿತವಾಗಿರಬೇಕು ಸಾಂಪ್ರದಾಯಿಕ ಅಡುಗೆಗಳಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಶಿಕ್ಷಕಿ ಪೂಜಾ ಭಟ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಪಾಂಡೇಶ್ವರ ವಲಯದ, ಗುಂಡ್ಮಿ ಕಾರ್ಯಕ್ಷೇತ್ರದ ಶ್ರೀಭಗವತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಭಗವತಿ ದೇವಸ್ಥಾನದ ಆಡಳಿತ ಮುಖ್ಯಸ್ಥ ಉದಯ ಮಯ್ಯ ಉದ್ಘಾಟಿಸಿದರು.

ನಿವೃತ್ತ ಶಿಕ್ಷಕ ನಾಗೇಶ್, ಒಕ್ಕೂಟ ನಿಕಟ ಪೂರ್ವ ಅಧ್ಯಕ್ಷ ಶೇಖರ್ ಪೂಜಾರಿ, ವಲಯ ಮೇಲ್ವಿಚಾರಕ ಜಯಲಕ್ಷ್ಮೀ, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಪುಷ್ಪಲತಾ, ಸೇವಾ ಪ್ರತಿನಿಧಿ ಶಶಿಕಲಾ , ಕೇಂದ್ರದ ಸಂಯೋಜಕಿ ಹೇಮಾ ಮತ್ತು ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net