More

    ಹೇಗಿದೆ ಮ್ಯಾಟ್ನಿಯ ಮಾಸ್ ಸಾಂಗ್? ಹೊಸ ವರ್ಷಕ್ಕೆ ಬಿಡುಗಡೆಯಾಯ್ತು ಹೊಸ ಪಾರ್ಟಿ ಸಾಂಗ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    ‘ಅಯೋಗ್ಯ’ ಚಿತ್ರದ ಯಶಸ್ಸಿನ ಬಳಿಕ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಮತ್ತೆ ಒಂದಾಗಿರುವ ಚಿತ್ರ ‘ಮ್ಯಾಟ್ನಿ’. ಮನೋಹರ್ ಕಾಂಪಲ್ಲಿ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಸತೀಶ್, ರಚಿತಾ ಜತೆ ಅದಿತಿ ಪ್ರಭುದೇವ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ನಾಗಭೂಷಣ, ಶಿವರಾಜ್ ಕೆ.ಆರ್. ಪೇಟೆ, ಪೂರ್ಣಚಂದ್ರ ಮೈಸೂರು ಪ್ರಮುಖ ತಾರಾಗಣದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ‘ಸಂಜೆ ಮೇಲೆ ಫೋನು ಮಾಡ್ಲ ನಿಂಗೆ’ ಎಂದು ಸಾಗುವ ಸತೀಶ್ ಮತ್ತು ರಚಿತಾ ನಡುವಿನ ಡೂಯೆಟ್ ಸಾಂಗ್ ರಿಲೀಸ್ ಆಗಿತ್ತು. ಆ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

    ಇದನ್ನೂ ಓದಿ : ದರ್ಶನ್ ಹಿಂದಿದೆ ಈ ಮಹಾಶಕ್ತಿ…ಅಂದು ಸಾರಥಿ, ಇಂದು ಕಾಟೇರ, ಮತ್ತೆ ಜರುಗಿತು ಪವಾಡ

    ಹೇಗಿದೆ ಮ್ಯಾಟ್ನಿಯ ಮಾಸ್ ಸಾಂಗ್? ಹೊಸ ವರ್ಷಕ್ಕೆ ಬಿಡುಗಡೆಯಾಯ್ತು ಹೊಸ ಪಾರ್ಟಿ ಸಾಂಗ್​

    ಅದರ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ನಟ ಡಾಲಿ ಧನಂಜಯ ‘ಬಾರೋ ಬಾರೋ ಬರುವಾಗ ಬಾಟಲ್ ತಾರೋ’ ಎಂಬ ಪಾರ್ಟಿ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಬರೆದು, ಸಂಗೀತ ನೀಡಿರುವ ಈ ಹಾಡಿಗೆ ನಾಯಕ ಸತೀಶ್ ನೀನಾಸಂ, ಪೂರ್ಣಚಂದ್ರ ತೇಜಸ್ವಿ ಮತ್ತು ರಿಯಲ್ ರನ್ನ ಧ್ವನಿಯಾಗಿದ್ದಾರೆ. ಈ ಪಾರ್ಟಿ ಸಾಂಗ್‌ನಲ್ಲಿ ಸತೀಶ್ ಜತೆ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ, ಪೂರ್ಣ ಡಾನ್ಸರ್‌ಗಳ ಜತೆ ಕುಣಿದು ಕುಪ್ಪಳಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನವಿರಲಿದೆ.

    ಇದನ್ನೂ ಓದಿ : ಪೊಂಗಲ್ ಹಬ್ಬಕ್ಕೆ ಕ್ಯಾಪ್ಟನ್ ಮಿಲ್ಲರ್ ಫಿಕ್ಸ್​ ; ಧನುಷ್ – ಶಿವಣ್ಣ ನಟಿಸಿರುವ ಚಿತ್ರ ಜ. 12ರಂದು ರಿಲೀಸ್

    ಹೇಗಿದೆ ಮ್ಯಾಟ್ನಿಯ ಮಾಸ್ ಸಾಂಗ್? ಹೊಸ ವರ್ಷಕ್ಕೆ ಬಿಡುಗಡೆಯಾಯ್ತು ಹೊಸ ಪಾರ್ಟಿ ಸಾಂಗ್​

    ನನ್ನ ಮೊದಲ ಪಾರ್ಟಿ ಸಾಂಗ್ ಇದು. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ಹಾಡು ಹಿಟ್ ಆಗಿತ್ತು, ಎರಡನೇ ಸಾಂಗ್ ಕೂಡ ಹಿಟ್ ಆಗಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಹೊಸ ವರ್ಷಕ್ಕೆ ಹಲವು ಪಬ್‌ಗಳಲ್ಲೂ ಹಾಡನ್ನು ಪ್ಲೇ ಮಾಡಿದ್ದಾರೆ. ಟ್ರೆಂಡಿ ಸಾಂಗ್ ನಿರೀಕ್ಷಿಸಿದಂತೆಯೇ ಒಂದೊಳ್ಳೆ ಕ್ರೇಜ್ ಸೃಷ್ಟಿಸಿದೆ’ ಎಂದು ನಾಯಕ ಸತೀಶ್​ ನೀನಾಸಂ ಸಂತಸ ವ್ಯಕ್ತಪಡಿಸಿದ್ದಾರೆ.

    ಹೇಗಿದೆ ಮ್ಯಾಟ್ನಿಯ ಮಾಸ್ ಸಾಂಗ್? ಹೊಸ ವರ್ಷಕ್ಕೆ ಬಿಡುಗಡೆಯಾಯ್ತು ಹೊಸ ಪಾರ್ಟಿ ಸಾಂಗ್​
    ಹೇಗಿದೆ ಮ್ಯಾಟ್ನಿಯ ಮಾಸ್ ಸಾಂಗ್? ಹೊಸ ವರ್ಷಕ್ಕೆ ಬಿಡುಗಡೆಯಾಯ್ತು ಹೊಸ ಪಾರ್ಟಿ ಸಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts