More

    ದರ್ಶನ್ ಹಿಂದಿದೆ ಈ ಮಹಾಶಕ್ತಿ…ಅಂದು ಸಾರಥಿ, ಇಂದು ಕಾಟೇರ, ಮತ್ತೆ ಜರುಗಿತು ಪವಾಡ

    ಬೆಂಗಳೂರು: ಸ್ಯಾಂಡಲ್​ವುಡ್​​ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಧೂಳ್​ ಎಬ್ಬಿಸುತ್ತಿದೆ. ಕಾಟೇರ ಸಿನಿಮಾ ನೋಡಿದ ಪ್ರೇಕ್ಷಕ ಹೊರತುಪಡಿಸಿ, ಸೆಲೆಬ್ರಿಟಿ ವಲಯದಿಂದಲೂ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಸಿನಿಮಾ ಹಿಟ್​​ ಆಗುತ್ತಿದ್ದಂತೆ ನೆಟ್ಟಿಗರು ಕಾಟೇರಿ ದೇವಿ ಕುರಿತಾಗಿ ದರ್ಶನ್​ಗೆ ಇರುವ ಭಕ್ತಿ ಮತ್ತೆ ಸಾಬೀತಾಗಿದೆ. ದಶರ್ನ್​​ ಸಿನಿಮಾದಲ್ಲಿ ದೇವಿ ಕಥಾಹಂದರ ಇದ್ದರೆ ಸಿನಿಮಾ ಹಿಟ್​ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಬನ್ನಿ ದರ್ಶನ್​​ ಅವರ ಹಿಂದೆ ಇರುವ ಆ ಶಕ್ತಿ ಯಾವುದು? ಏನಿದೆ ಸ್ಟೋರಿ ಎಂದು ನೋಡೋಣ…

    ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್‌ಆಫೀಸ್ ಸುಲ್ತಾನ’,`ದಾಸ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಕೆಲವು ಸಿನಿಮಾಗಳು ಮಾತ್ರ ನೀರಿಕ್ಷೆಗೆ ತಕ್ಕಂತ ಪ್ರತಿಫಲ ನೀಡದೆ ಇದ್ದರು ಬಾಕ್ಸ್​ ಆಫಿಸ್​ನಲ್ಲಿ ಸೌಂಡ್​​ ಮಾಡುತ್ತವೆ. ತುಂಬಾ ದಿನಗಳ ನಂತರ ದರ್ಶನ್​ ಅವರು ಒಂದು ಒಳ್ಳೆಯ ಹಿಟ್​ ಸಿನಿಮಾ ನೀಡಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

    ಸಿಕ್ಕಿರುವ ಸಣ್ಣ ಪುಟ್ಟ ಪಾತ್ರಗಳು ದರ್ಶನ್​ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತ್ತು. 2002ರಲ್ಲಿ ತೆರೆಕಂಡ ‘ಮೆಜೆಸ್ಟಿಕ್’ ಚಿತ್ರದಲ್ಲಿ ದರ್ಶನ್ ಮೊದಲ ಸಲ ನಾಯಕ ನಟರಾದರು. ಮೆಜೆಸ್ಟಿಕ್ ಸಿನಿಮಾ ದೊಡ್ಡ ಹಿಟ್ ಆಯಿತು. ದರ್ಶನ್ ಹೀರೋ ಆಗಿ ನಿಂತರು. ಸಾಕಷ್ಟು ಆಫರ್‌ಗಳು ಬರಲು ಶುರುವಾಯಿತು. ನಂತರ ದಾಸ, ಕಲಾಸಿಪಾಳ್ಯ ಸಿನಿಮಾಗಳು ದರ್ಶನ್​ ಅವರಿಗೆ ಸ್ಟಾರ್​ ಹೀರೋ ಪಟ್ಟವನ್ನು ತಂದುಕೊಟ್ಟಿತ್ತು. ನಂತರ ದರ್ಶನ್​​ ಕಾಣಿಸಿಕೊಂಡ ಸಿನಿಮಾಗಳೆಲ್ಲ ಸೂಪರ್​ ಹಿಟ್ಟ ಎನ್ನುವಂತೆ ಅಭಿಮಾನಿಗಳ ಬಳಗ ಹುಟ್ಟಿಕೊಂಡಿತ್ತು. ಈ ಯಶಸ್ಸಿನ ಮಧ್ಯೆ 2011ರ ಸೆಪ್ಟೆಂಬರ್‌ನಲ್ಲಿ ದರ್ಶನ್ ವಿವಾದವೊಂದರಲ್ಲಿ ಭಾಗಿಯಾಗಿದ್ದರು.

    ಪತ್ನಿ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ಅವರನ್ನು ಬಂಧಿಸಲಾಯಿತು ಮತ್ತು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿ 14 ದಿನಗಳನ್ನು ಕಳೆದರು. ಈ ವೇಳೆ ಸಾರಥಿ ಸಿನಿಮಾ ರಿಲೀಸ್​ ಆಗಲು ಸಿದ್ಧವಾಗಿತ್ತು.

    ಜೈಲಿನಲ್ಲಿದ್ದಾಗಲೇ ತೆರೆಕಂಡ ಸಿನಿಮಾ ಸಾರಥಿ ಬಹಳ ದೊಡ್ಡ ಯಶಸ್ಸು ಸಾಧಿಸಿತು. ದರ್ಶನ್ ವೃತ್ತಿ ಜೀವನ ಮುಗಿತು ಎಂದುಕೊಂಡಿದ್ದವರಿಗೆ ಈ ಸಕ್ಸಸ್ ಅಚ್ಚರಿ ಉಂಟು ಮಾಡಿತು. ದರ್ಶನ್ ಈಸ್ ಬ್ಯಾಕ್ ಎನ್ನುವ ಸಂದೇಶ ರವಾನಿಸಿತು. ನಂತರ ಕುರುಕ್ಷೇತ್ರ, ರಾಬರ್ಟ ಸಿನಿಮಾದಲ್ಲಿ ದರ್ಶನ್ ನಟಿಸಿದ್ದರು ಆದರೂ ಅವರು ಅಂದುಕೊಂಡಿದ್ದ ಮಟ್ಟಿಗೆ ಸಕ್ಸಸ್​​ ನೀಡಿರಲಿಲ್ಲ. ಆದರೆ ಇದೀಗ ಕಾಟೇರಾ ಸಿನಿಮಾ ಮಾತ್ರ ಸೂಪರ್​ ಡೂಪರ್​ ಹಿಟ್ಟ ಆಗುತ್ತಿದೆ. ಏಳು-ಬೀಳುಗಳೊಂದಿಗೆ ಸಾಗುತ್ತಿದ್ದ ದರ್ಶನ್ ಜೀವನದಲ್ಲಿ ಕೈ ಹಿಡಿದಿದ್ದು ಚಾಮುಂಡಿ ದೇವಿ.

    ನಟ ದರ್ಶನ್ ಮೂಲತಃ ಮೈಸೂರಿನ ನಿವಾಸಿ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ನಟ ದರ್ಶನ್ ವಿಶೇಷ ಸಂದರ್ಭಗಳಲ್ಲಿ ಹಾಗೂ ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುತ್ತಿರುತ್ತಾರೆ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಟ ದರ್ಶನ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ. ಆದರೆ ದರ್ಶನ್ ಅವರು ತಮ್ಮ ಸಿನಿಮಾ ಕಥೆಯಲ್ಲಿ ಚಾಮುಂಡಿ ದೇವಿಯ ಒಂದು ಲೈನ್​ ಸೇರಿಸಿಕೊಂಡರು ಕಥೆ ಸೂಪರ್​ ಹಿಟ್​ ಆಗುತ್ತದೆ ಎನ್ನುವ ಟಾಕ್​ ಗಾಂಧಿನಗರದಲ್ಲಿ ಶುರುವಾಗಿದೆ.

    ಹೌದು…ಸಾರಥಿ ಸಿನಿಮಾದಲ್ಲಿ ಚಾಮುಂಡಿ ದೇವಿಯ ಕಥೆಗೆ ಸರಿ ಹೊಂದುವಂತೆ ತೆಗೆದುಕೊಳ್ಳಲಾಗಿತ್ತು. ಈ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೀಯರ್‌ನಲ್ಲಿ ಮರು ಜೀವ ಕೊಟ್ಟ ಸಿನಿಮಾ ಆಗಿತ್ತು. ನಿರೀಕ್ಷೆ ಮಾಡದ ರೀತಿಯಲ್ಲಿ ಥಿಯೇಟರ್‌ ಜನ ಸಾಗರವೇ ನೆರೆದಿತ್ತು. ನಿರೀಕ್ಷೆ ಮಾಡಿದೆ ಇರೋ ಮಟ್ಟಕ್ಕೆ ಸಿನಿಮಾ ಗೆದ್ದು ಬೀಗಿತ್ತು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೂರೇ ದಿನದಲ್ಲಿ 75 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ,  ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈಗ ಕಾಟೇರ ಸಿನಿಮಾದಲ್ಲೂ ಪಾರ್ವತಿಯ ರೂಪವೆಂದು ಪರಿಗಣಿಸಲಾಗುವ ಕಾಟೇರಿ ದೇವಿಯ ಕಥೆ ಬಳಸಲಾಗಿದೆ. ಕಾಟೇರಿ ಅನುಯಾಯಿಗಳು ಅವಳನ್ನು ಮಹಾದೇವಿಯ ರೂಪವೆಂದು ಪರಿಗಣಿಸುತ್ತಾರೆ. ಹೀಗೆ ದರ್ಶನ್ ಅವರ ಸೂಪರ್​ ಹಿಟ್​​ ಸಿನಿಮಾಗಳಿಗೆ ದೇವಿ ಶಕ್ತಿ ಇದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಅಂದು ವಿದೇಶದಲ್ಲಿ ಯುವತಿ ಜತೆ ಸಿಕ್ಕಿಬಿದ್ದ ಖ್ಯಾತ ನಟ ಇಂದು ಗಳಗಳನೆ ಕಣ್ಣೀರಿಟ್ಟ; ಕಾರಣ ಮಾತ್ರ ವಿಭಿನ್ನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts