ಪೊಂಗಲ್ ಹಬ್ಬಕ್ಕೆ ಕ್ಯಾಪ್ಟನ್ ಮಿಲ್ಲರ್ ಫಿಕ್ಸ್​ ; ಧನುಷ್ - ಶಿವಣ್ಣ ನಟಿಸಿರುವ ಚಿತ್ರ ಜ. 12ರಂದು ರಿಲೀಸ್

Captain-Miller-2
Published on

ಧನುಷ್ ನಾಯಕನಾಗಿರುವ 49ನೇ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’. ವಿಶೇಷ ಅಂದರೆ ಈ ಚಿತ್ರದಲ್ಲಿ ಕನ್ನಡದ ಶಿವರಾಜಕುಮಾರ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ರಜಿನಿಕಾಂತ್ ನಾಯಕರಾಗಿದ್ದ ‘ಜೈಲರ್’ ಸಿನಿಮಾದಲ್ಲಿ ‘ನರಸಿಂಹ’ ಎಂಬ ಸಣ್ಣ ಪಾತ್ರದಲ್ಲಿ ನಟಿಸಿದ್ದ ಶಿವಣ್ಣ ದೊಡ್ಡ ಮಟ್ಟದಲ್ಲಿ ಮಿಂಚಿದ್ದರು. ಹೀಗಾಗಿಯೇ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಜತೆಗೆ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೊಸ ವರ್ಷದ ಸಡಗರದಲ್ಲಿ ಚಿತ್ರತಂಡ ‘ಕ್ಯಾಪ್ಟನ್ ಮಿಲ್ಲರ್’ ರಿಲೀಸ್ ದಿನಾಂಕ ೋಷಿಸಿದೆ. ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಜ. 12ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಇದು ಆ್ಯಕ್ಷನ್ ಜಾನರ್ ಚಿತ್ರವಾಗಿದ್ದು ಸ್ವಾತಂತ್ರ್ಯ ಹೋರಾಟದ ಸಮಯ ನಡೆಯುವ ಕಥಾಹಂದರ ಹೊಂದಿದೆ.

ಚಿತ್ರವನ್ನು ‘ರಾಕಿ’ ಖ್ಯಾತಿಯ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧನುಷ್‌ಗೆ ಪ್ರಿಯಾಂಕಾ ಮೋಹನನ್ ನಾಯಕಿಯಾಗಿದ್ದಾರೆ. ಉಳಿದಂತೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತದಲ್ಲಿ ‘ಕ್ಯಾಪ್ಟನ್ ಮಿಲ್ಲರ್’ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net