More

    ಕಾಟೇರ ಒಟಿಟಿ ರಿಲೀಸ್ ಯಾವಾಗ?​ ಯಾರ ಪಾಲಾಯ್ತು ಹಕ್ಕು? ಇಲ್ಲಿದೆ ಮಾಹಿತಿ..

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಬರುತ್ತಿದೆ. ​ಪ್ರದರ್ಶನ ಕಂಡಿರುವ ಎಲ್ಲೆಡೆ ಹೌಸ್ ಫುಲ್ ಆಗುತ್ತಿದ್ದು, ಬಾಕ್ಸ್ ಆಫೀಸ್​ನಲ್ಲಿ ಭಾರಿ ಕಲೆಕ್ಷನ್ ಮಾಡ್ತಿದೆ. ಕಾಟೇರ ವೀಕ್ಷಣೆ ನಂತರ ಅಭಿಮಾನಿಗಳು ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಒಟ್ಟಾರೆ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಈ ನಡುವೆ ಕಾಟೇರ ಸಿನಿಮಾಗೆ ಸಂಬಂಧಿಸಿದ ಒಟಿಟಿ ಅಪ್ಡೇಟ್ ಹೊರಬಿದ್ದಿದೆ.

    ಇದನ್ನೂ ಓದಿ: ಕಾಂಗ್ರೆಸ್ ಸೇರಲಿದ್ದಾರೆ ಶರ್ಮಿಳಾ..ಆಂಧ್ರಪ್ರದೇಶ ಪಿಸಿಸಿ ಮುಖ್ಯಸ್ಥೆ!

    ಸಿನಿಮಾ ರಿಲೀಸ್ ಆಗಿ 5 ದಿನ ಕಳೆದಿದೆ. ಉತ್ತಮ ರೆಸ್ಪಾನ್ಸ್​ ಸಹ ಸಿಗುತ್ತಿದೆ. ಈ ನಡುವೆ ಸಿನಿಮಾ ಒಟಿಟಿ ಫ್ಲ್ಯಾಟ್​ಫಾರಂಗೆ ಯಾವಾಗ ಬರುತ್ತದೆ. ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವ ಲೆಕ್ಕಾಚಾರ ಅಭಿಮಾನಿಗಳಲ್ಲಿತ್ತು. ಇಂತಹವರಿಗೆ ಗುಡ್​ನ್ಯೂಸ್ ಹೊರಬಿದ್ದಿದೆ. ಕಾಟೇರ ಒಟಿಟಿ ಕುರಿತಾದ ಸುದ್ದಿ ಸ್ಯಾಂಡಲ್​ವುಡ್​ ಅಂಗಳದಲ್ಲಿ ಸದ್ದು ಮಾಡ್ತಿದೆ.

    ಥಿಯೇಟರ್​ಗಳಲ್ಲಿ ಚಿತ್ರದ ಓಟ ಮುಗಿದ ನಂತರ ಓಟಿಟಿಗೆ ಬರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದ ಒಟಿಟಿ ಹಕ್ಕು ಜೀ5 ಖರೀದಿಸಿದೆ ಎನ್ನಲಾಗುತ್ತಿದೆ. ಇದನ್ನು ಚಿತ್ರತಂಡ ಸಹ ಶೀಘ್ರ ಘೋಷಣೆ ಮಾಡಲಿದೆ. ಒಟಿಟಿಯಲ್ಲಿ ಸಹ ಕಾಟೇರ ದಾಖಲೆ ಬರೆಯುತ್ತದೆ ಎನ್ನಲಾಗುತ್ತಿದೆ. ಶಿವರಾಜ್ ಕುಮಾರ್ ಘೋಸ್ಟ್​ ಸಿನಿಮಾ ಕೂಡ ಜಿ5 ನಲ್ಲೇ ಪ್ರಸಾರ ಕಂಡಿತ್ತು.

    ಭಾರೀ ಕಲೆಕ್ಷನ್: ಕಾಟೇರ ಸಿನಿಮಾ ಸಿನಿ ಪ್ರಿಯರ ಮನಗೆದ್ದಿದೆ. ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ಸಾಲು ಸಾಲು ರಜೆ ಹಿನ್ನೆಲೆ ಸಿನಿಮಾ ಕಲೆಕ್ಷನ್ ಕೂಡ ಜೋರಾಗಿದೆ. 3 ದಿನಕ್ಕೆ ಕಾಟೇರ ಸಿನಿಮಾ 58.8 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ನಾಲ್ಕನೇ ದಿನವೂ ದರ್ಶನ್​ ಸಿನಿಮಾ 18.20 ಕೋಟಿ ರೂ.ಕಲೆಕ್ಷನ್ ಮಾಡಿದ್ದು, ಒಟ್ಟು 75.6 ಕೋಟಿ ರೂ. ಆಗಿದೆ.

    ಪಾಕ್ ಪಂದ್ಯಕ್ಕೂ ಮುನ್ನ ವಾರ್ನರ್ ಗ್ರೀನ್ ಕ್ಯಾಪ್ ಕಳುವು!: ಹುಡುಕಿಕೊಡಲು ಮನವಿ-ಈ ಕ್ಯಾಪ್​ಗೇಕೆ ಅಷ್ಟೊಂದು ಮಹತ್ವ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts