More

    ಪಾಕ್ ಪಂದ್ಯಕ್ಕೂ ಮುನ್ನ ವಾರ್ನರ್ ಗ್ರೀನ್ ಕ್ಯಾಪ್ ಕಳುವು!: ಹುಡುಕಿಕೊಡಲು ಮನವಿ-ಈ ಕ್ಯಾಪ್​ಗೇಕೆ ಅಷ್ಟೊಂದು ಮಹತ್ವ?

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರ ‘ಬ್ಯಾಗಿ ಗ್ರೀನ್ ಕ್ಯಾಪ್’ ಕಳ್ಳತನವಾಗಿದೆ. ಈ ಮಾಹಿತಿಯನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ. ತಂಡದ ಆರಂಭಿಕ ಎಡಗೈ ಬ್ಯಾಟ್ಸ್‌‌ಮನ್ ಆಗಿರುವ ಅವರು ಬುಧವಾರ (ಜ.3) ಪಾಕಿಸ್ತಾನ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ ಸೇರಲಿದ್ದಾರೆ ಶರ್ಮಿಳಾ..ಆಂಧ್ರಪ್ರದೇಶ ಪಿಸಿಸಿ ಮುಖ್ಯಸ್ಥೆ!
    ಬಾಕ್ಸಿಂಗ್ ಡೇ ಟೆಸ್ಟ್ ನಂತರ ವಾರ್ನರ್ ಮೆಲ್ಬೋರ್ನ್ನಿಂದ ಸಿಡ್ನಿಗೆ ಹೊರಟಿದ್ದಾಗ ಕ್ರಿಕೆಟ್ ಬ್ಯಾಗ್‌ ಕಳವಾಗಿದೆ. ಅದರೊಳಗೆ ಸಣ್ಣ ಬ್ಯಾಕ್ಪ್ಯಾಕ್ ಅನ್ನು ಇಡಲಾಗಿತ್ತು. ತನಗೆ ಬ್ಯಾಗಿ ಗ್ರೀನ್ ಕ್ಯಾಪ್ ಹಿಂದಿರುಗಿಸುವವರಿಗೆ ಬ್ಯಾಕ್ಪ್ಯಾಕ್ ನೀಡುವುದಾಗಿ ವಾರ್ನರ್ ಹೇಳಿದ್ದಾರೆ.

    ಸಿಡ್ನಿಯಲ್ಲಿ ನಡೆಯಲಿರುವ ಸರಣಿಯ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಂತರ ವಾರ್ನರ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಅವರು ಇದು ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿ ಎಂದು ಘೋಷಿಸಿದ್ದರು. ಆದರೆ ಪಂದ್ಯಕ್ಕೂ ಮೊದಲು ತಮ್ಮ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡಿರುವುದು ದುಃಖವಾಗಿದೆ ಎಂದು ವಾರ್ನರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಹಾಕಿರುವ ವೀಡಿಯೊದಲ್ಲಿ ನೋವು ಹಂಚಿಕೊಂಡಿದ್ದಾರೆ.

    ಕ್ಯಾಪ್‌ ಸಿಕ್ಕರೆ ದಯವಿಟ್ಟು ಅದನ್ನು ಹಿಂದಿರುಗಿಸಿ ಅವರು ಭಾವನಾತ್ಮಕವಾಗಿ ಮನವಿ ಮಾಡಿದ್ದು, ಮೆಲ್ಬೋರ್ನ್ ನಿಂದ ಸಿಡ್ನಿಗೆ ಬರುವಾಗ ಈ ಟೋಪಿಯನ್ನು ಕಳವು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

    ವಾರ್ನರ್ ಅವರು ತಂಡ ತಂಗಿದ್ದ ಹೋಟೆಲ್ ಮತ್ತು ಪ್ರಯಾಣಿಸಿದ ವಿಮಾನದ ಸಂಸ್ಥೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ.

    ಕ್ಯಾಪ್​ಗೆ ಪ್ರಾಮುಖ್ಯತೆ ಏಕೆ?: ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಸ್ಟ್ರೇಲಿಯಾದ ಆಟಗಾರರಿಗೆ ನೀಡಲಾಗುವ ಕ್ಯಾಪ್ ಅನ್ನು ‘ಬ್ಯಾಗಿ ಗ್ರೀನ್ ಕ್ಯಾಪ್‌’ ಎಂದು ಕರೆಯಲಾಗುತ್ತದೆ. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಟಗಾರರು ಹಸಿರು ಕ್ಯಾಪ್ ಗಳನ್ನು ಧರಿಸುತ್ತಾರೆ.

    ಜಪಾನ್ ಭೂಕಂಪಕ್ಕೆ ಎನ್​ಟಿಆರ್ ​ ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts