More

    ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೇವಿಡ್​ ವಾರ್ನರ್; ಕಣ್ಣೀರಿಟ್ಟ ಅಭಿಮಾನಿಗಳು

    ಸಿಡ್ನಿ: ಅಸೀಸ್​ ಸ್ಫೋಟಕ ಆರಂಭಿಕ ಆಟಗಾರ, ಕ್ರಿಕಟ್​ ದಿಗ್ಗಜ ಡೇವಿಡ್ ವಾರ್ನರ್ ಪಾಕಿಸ್ತಾನದ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್‌ಗೆ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ವಿದಾಯ ಹೇಳಿದ್ದಾರೆ.

    ತಮ್ಮ ಟೆಸ್ಟ್ ವೃತ್ತಿಜೀವನದ 37ನೇ ಅರ್ಧಶತಕವನ್ನುಗಳಿಸಿದ ತಕ್ಷಣ, ವಾರ್ನರ್ ಅವರನ್ನು ಅವರ ಪತ್ನಿ ಮತ್ತು ಮಗಳು ಚಪ್ಪಾಳೆಯೊಂದಿಗೆ ಚಿಯರ್‌ ಮಾಡಿದರು. ಪಂದ್ಯ ಮುಗಿದ ಬಳಿಕ ಪತ್ನಿಗೆ ವಾರ್ನರ್‌ ಮೈದಾನದಲ್ಲಿಯೇ ಮುತ್ತಿಕ್ಕಿದ್ದು, ಮಕ್ಕಳನ್ನು ತಬ್ಬಿಕೊಂದು ಭಾವುಕರಾದರು ಕುಟುಂಬದೊಂದಿಗಿನ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿದೆ.

    ಪಾಕಿಸ್ತಾನದ ನಾಯಕ ಶಾನ್ ಮಸೂದ್ ಡೇವಿಡ್ ವಾರ್ನರ್‌ಗೆ ಟೆಸ್ಟ್ ತಂಡದಲ್ಲಿರುವ ಎಲ್ಲಾ ಆಟಗಾರರ ಸಹಿ ಮಾಡಿದ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಿ ಗೌರವ ನೀಡಿದರು. ಡೇವಿಡ್ ವಾರ್ನರ್ ಕೊನೆಯ ಬಾರಿಗೆ ಟೆಸ್ಟ್‌ನಲ್ಲಿ ಆಡುವುದನ್ನು ವೀಕ್ಷಿಸಲು ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ಮತ್ತು ಮೂವರು ಪುತ್ರಿಯರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಹಾಜರಿದ್ದರು. ಕ್ರೀಂಡಾಗಣದಲ್ಲಿ ಎದ್ದುನಿಂತು ಚೆಪ್ಪಾಳೆ ತಟ್ಟಿ ಗೌರವ ಸೂಚಿಸಿದರು. ವಾರ್ನರ್​ ಸಿಡ್ನಿಯಲ್ಲಿ ಆಡಿದ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು.

    ಆಸೀಸ್​ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 2011 ಡಿಸೆಂಬರ್ ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಕೊನೆಯ ಟೆಸ್ಟ್‌ಗೂ ಮುನ್ನ ವಾರ್ನರ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು 2023 ರ ವಿಶ್ವಕಪ್‌ನ ಫೈನಲ್‌ನಲ್ಲಿ ತಮ್ಮ ಕೊನೆಯ ODI ಪಂದ್ಯವನ್ನು ಆಡಿದರು.

    ಡೇವಿಡ್‌ ವಾರ್ನರ್ ಟೆಸ್ಟ್ ಸಾಧನೆ: 2011ರ ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಡೇವಿಡ್ ವಾರ್ನರ್ 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದು, 335 ಇವರ ಗರಿಷ್ಠ ಮೊತ್ತವಾಗಿದೆ. ವಿಶ್ವಶ್ರೇಷ್ಠ ಫೀಲ್ಡರ್ ಆಗಿರುವ ವಾರ್ನರ್ 91 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಆಸೀಸ್‌ನ ಮತ್ತೊಂದು ದಂತಕಥೆ ಟೆಸ್ಟ್‌ ಕ್ರಿಕೆಟ್‌‌ಗೆ ವಿದಾಯ ಹೇಳಿದಂತಾಗಿದೆ.‘

    ನಾನು ಕಂಡ ಕನಸು ನನಸಾಗಿದೆ: ನಾನು ಕಂಡ ಕನಸು ನಿಜವಾಗಿರುವುದಕ್ಕೆ ಸಂತೋಷವಾಗುತ್ತಿದೆ. ಪಾಕಿಸ್ತಾನದ ವಿರುದ್ಧ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದೇವೆ. ಕಳೆದ 18 ತಿಂಗಳುಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್ ಉತ್ತಮ ಸಾಧನೆ ಮಾಡಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅನ್ನು ಜಯಿಸಿದೆ. ವೃತ್ತಿಜೀವನದಲ್ಲಿ ಮಾರ್ಗದರ್ಶಿ ಮತ್ತು ಬೆಳಕಾಗಿರುವ ಪೋಷಕರು ಮತ್ತು ಸಹೋದರ ಸ್ಟೀವ್‌, ಪತ್ನಿ ಕ್ಯಾಂಡಿಸ್ ವಾರ್ನರ್ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ಡೇವಿಡ್ ವಾರ್ನರ್‌ಗೆ ಜೆರ್ಸಿ ಗಿಫ್ಟ್ ನೀಡಿದ ಪಾಕ್ ಕ್ರಿಕೆಟ್​ ತಂಡ: ನಾನು ವಾರ್ನರ್‌ಗೆ ದೊಡ್ಡ ಉಡುಗೊರೆ ನೀಡಲು ಬಯಸುತ್ತೇನೆ. ವಾರ್ನರ್‌ಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಪಾಕ್ ಆಟಗಾರರ ಸಹಿಯಿರುವ ಬಾಬರ್ ಆಝಮ್ ಅವರ ಜೆರ್ಸಿಯನ್ನು ನೀಡಲು ಬಯಸಿದ್ದು, ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಪಾಕಿಸ್ತಾನದ ನಾಯಕ ಶಾನ್ ಮಸೂದ್ ಹೇಳಿದರು.

    ಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ವಾರ್ನರ್: ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೇವಲ ತಮ್ಮ ಬ್ಯಾಟಿಂಗ್ ಕೌಶಲ್ಯವಷ್ಟೇ ಅಲ್ಲದೆ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಅವರು ಆಗಾಗ ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕ ಸಾಬೀತುಪಡಿಸುತ್ತಲೇ ಇರುತ್ತಾರೆ. ಮಹೇಶ್ ಬಾಬು ಅಭಿನಯದ 2006 ರ ಆಕ್ಷನ್ ಥ್ರಿಲ್ಲರ್ ‘ಪೋಕಿರಿ’ ಯಿಂದ ಪ್ರಸಿದ್ಧ ತೆಲುಗು ಚಲನಚಿತ್ರ ಸಂಭಾಷಣೆಯನ್ನು ತುಟಿ-ಸಿಂಕ್ ಮಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತರ ಈಗ ವಾರ್ನರ್ ಈಗ ಮತ್ತೊಂದು ತೆಲುಗು ಸಾಂಗ್​ನೊಂದಿಗೆ ಬಂದಿದ್ದಾರೆ. ಇದರಲ್ಲಿ ತಮ್ಮ ಪತ್ನಿ ಹಾಗೂ ಪುತ್ರಿ ಇಬ್ಬರು ರಾಮಲೂ ರಾಮೂಲು ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ಡ್ಯಾನ್ಸ್​ ಮಾಡಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.
    ಐಪಿಎಲ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ  ಪರ ಆಡಿದ್ದರಿಂದ ವಾರ್ನರ್‌ಗೆ ಹೈದರಾಬಾದ್‌ನಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

    ಅಯೋಧ್ಯೆ ಶ್ರೀರಾಮನ ದೇವಸ್ಥಾನದ ಸುರಕ್ಷತೆಗೆ (AI) ಆಧುನಿಕ ತಂತ್ರಜ್ಞಾನದ ಕಣ್ಗಾವಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts