''ಏಯ್, ಸ್ವಲ್ಪ ತಡಿರೊ...''; ಧ್ರುವ ಸರ್ಜಾ ಅಭಿಮಾನಿಗಳ ಮೇಲೆ ರಚಿತಾ ರಾಮ್ ಗರಂ!

''ಏಯ್, ಸ್ವಲ್ಪ ತಡಿರೊ...'' ಧ್ರುವ ಸರ್ಜಾ ಅಭಿಮಾನಿಗಳ ಮೇಲೆ ರಚಿತಾ ರಾಮ್ ಗರಂ! #RachithaRam #DhruvaSarja - youtube
Published on
ಬೆಂಗಳೂರು: ನಟ ಧ್ರುವ ಸರ್ಜಾ ಅವರ ಅಭಿಮಾನಿಗಳನ್ನು ವರ್ಣಿಸಲು ಪದಗಳನ್ನು ಹುಡುಕಬೇಕು. ಹೌದು, ಎಲ್ಲಿ ಹೋದರೂ ನಟ ಧ್ರುವ ಸರ್ಜಾ ಆ ಸ್ಥಳದಲ್ಲಿ ಕಾಣಿಸಿಕೊಂಡರೆ ಸಾಕು, ಬರೀ ಧ್ರುವ ಸರ್ಜಾಗೆ ಜೈಕಾರ ಹಾಕುತ್ತಾರೆ. ಧ್ರುವ ಅವರ ಅಭಿಮಾನಿಗಳ ಪ್ರೀತಿ ಕಂಡು ಎಲ್ಲರ ಕಣ್ತುಂಬಿಕೊಳ್ಳುತ್ತೆ. ಆದರೆ, ನಟಿ ರಚಿತಾ ರಾಮ್ ಅವರಿಗೆ ಯಾಕೋ ಧ್ರುವ ಸರ್ಜಾ ಅಭಿಮಾನಿಗಳ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಯಾಕೆ ಅಂತೀರಾ? ಅಂದಹಾಗೆ, ನಟಿ ರಚಿತಾ ರಾಮ್ ಅವರ 'ಲವ್ ಯು ರಚ್ಚು' ಸಿನಿಮಾ ಈಗ ರಿಲೀಸ್​ಗೆ ರೆಡಿಯಾಗಿದೆ. ಚಿತ್ರ ಈಗಾಗಲೇ ಬಹಳಷ್ಟು ಕಾರಣಗಳಿಗೆ ಸುದ್ದಿಯಲ್ಲಿದೆ. ಇನ್ನು, ಗುರುವಾರದಂದು 'ಲವ್ ಯು ರಚ್ಚು' ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಅವರೆ ಅತಿಥಿಯಾಗಿದ್ದರು.
ಹೀಗಾಗಿ, ಧ್ರುವ ಸರ್ಜಾ ಅಭಿಮಾನಿಗಳು ನಟ ಕಾರ್ಯಕ್ರಮಕ್ಕೆ ಬಂದ ಕೂಡಲೆ ಜೈಕಾರ ಹಾಕಲು ಶುರುಮಾಡಿದರು. ಈ ಸಂದರ್ಭದಲ್ಲಿ ಡಿಂಪಲ್ ಕ್ವೀನ್ ವೇದಿಕೆ ಹತ್ತಿ ಅವರು ಮಾತಾಡಲು ಆರಂಭಿಸಿದಾಗ ಕೂಡ ಧ್ರುವ ಸರ್ಜಾ ಅಭಿಮಾನಿಗಳದ್ದೇ ಕಾರುಬಾರು, ಕಿರ್​ಚಾಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರಚ್ಚು ಚುರು ಕೋಪಗೊಂಡಂಗೆ ಕಾಣಿಸಿತ್ತು. ನಟಿಗೆ ಮಾತಾಡಲು ಬಿಡದೆ ಕಿರುಚುತ್ತಿದ್ದ ಧ್ರುವ ಸರ್ಜಾ ಅಭಿಮಾನಿಗಳಿಂದ ಬೇಸತ್ತು ಹೋದ ರಚ್ಚು ಕೊನೆಗೆ ''ಏಯ್, ಸ್ವಲ್ಪ ತಡಿರೊ... ನಾನೂ ನಿಮ್ಮ ಜೊತೆ ಕಿರುಚುತಿನಿ... ಸ್ವಲ್ಪ ತಡಿರೊ... ಸ್ವಲ್ಪ ಹೊತ್ತು ಸುಮ್ಮನೇ ಇರಿ'' ಎಂದು ಗಟ್ಟಿ ಧ್ವನಿಯಲ್ಲಿ ಅವಾಜ್ ಹಾಕಿದ್ದಾರೆ. ಡಿ.31ಕ್ಕೆ 'ಲವ್ ಯು ರಚ್ಚು' ಚಿತ್ರ ಬಿಡುಗಡೆಯಾಗಲಿದ್ದು, ಅಜಯ್ ರಾವ್ ಅವರು ನಾಯಕ ನಟನ ಪಾತ್ರದಲ್ಲಿ ಮಿಂಚಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net