More

    ಕನ್ನಡಕ್ಕೆ ಅವಮಾನ ಮಾಡೋ ಕೆಲ್ಸ ಮಾಡ್ತಿದೆಯಾ ಪುಷ್ಪ ಟೀಮ್​? ಸಿನಿಮಾ‌ ನೋಡಲು ಬಂದವರಿಗೆ ನಿರಾಶೆ

    ಬೆಂಗಳೂರು: ಕನ್ನಡಕ್ಕೆ ಅವಮಾನ ಮಾಡುವ ಕೆಲಸವನ್ನು “ಪುಷ್ಪ” ಚಿತ್ರತಂಡ ಮಾಡುತ್ತಿದೆಯೇ ಎಂಬ ಸಂದೇಹ ದಟ್ಟವಾಗುತ್ತಿದೆ. ಏಕೆಂದರೆ, ಪುಷ್ಪ ಚಿತ್ರವನ್ನು ಕನ್ನಡದಲ್ಲಿ ಡಬ್​ ಮಾಡಿದ್ದರೂ ಕೂಡ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಗಿಂತ ತೆಲುಗು ಅವತರಣಿಕೆಯೇ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಒಂದೆಡೆಯಾದರೆ, ಇದೀಗ ಕನ್ನಡ ಅವತರಣಿಕೆಯನ್ನು ಪ್ರದರ್ಶನ ಮಾಡದೇ ಕನ್ನಡಕ್ಕೆ ಅಪಮಾನ ಎಸಗಲಾಗುತ್ತಿದೆ.

    ಕನ್ನಡದಲ್ಲೇ ಪುಷ್ಪ ಚಿತ್ರವನ್ನು ನೋಡಲು ತುಂಬಾ ಕಾತರರಾಗಿದ್ದ ಸಿನಿರಸಿಕರು ಇದೀಗ ಭಾರೀ ನಿರಾಶೆಯಾಗಿದ್ದಾರೆ. ಚಿತ್ರವನ್ನು ನೋಡಲು ಇಂದು ಬೆಳಗ್ಗೆ ವೆಂಕಟೇಶ್ವರದ ಅವಲಳ್ಳಿ ಥಿಯೇಟರ್​ನಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ, ಕನ್ನಡ ಅವತರಣಿಕೆ ‌ಬಂದಿಲ್ಲ ಅಂತಾ ಥಿಯೇಟರ್ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಚಿತ್ರ ನೋಡಲು ಬಂದವರಿಗೆ ಬೇಸರ ಆಗಿದೆ.

    ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಇಂದು ಕನ್ನಡದಲ್ಲಿಯೂ ಬಿಡುಗಡೆ ಆಗುತ್ತೆ ಅಂತ ಹೇಳಲಾಗಿತ್ತು. ಆದರೆ, ಇದೀಗ ಕನ್ನಡದಲ್ಲಿ ಬಿಡುಗಡೆಯಾಗಿಲ್ಲ. ಆದರೆ, ತೆಲುಗಿನಲ್ಲಿ ಚಿತ್ರ ಬಿಡುಗಡೆಯಾಗಿದೆ. ಅದು ಕೂಡ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆಲುಗು ಭಾಷೆಯಲ್ಲೇ ಚಿತ್ರ ಬಿಡುಗಡೆಯಾಗಿದೆ. ಆದರೆ, ಕನ್ನಡ ನೆಲದಲ್ಲಿ ಕನ್ನಡ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗದಿರುವುದು ದುರ್ದೈವದ ಸಂಗತಿಯೇ ಸರಿ.

    ಇನ್ನು ರಾಜಮೌಳಿಯವರ “ಆರ್​ಆರ್​ಆರ್​” ಚಿತ್ರದಲ್ಲಿ ಜೂ. ಎನ್​ಟಿಆರ್​ ಹಾಗೂ ರಾಮ್​ಚರಣ್​ ಕನ್ನಡದಲ್ಲಿ ಡಬ್​ ಮಾಡಿದ್ದಾರೆ. ಆದರೆ, ಕನ್ನಡತಿಯೇ ಆಗಿರುವ ರಶ್ಮಿಕಾ ಪುಷ್ಪ ಚಿತ್ರದಲ್ಲಿ ಡಬ್​ ಮಾಡದೇ ಕನ್ನಡವನ್ನು ದೂರ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಕನ್ನಡ ಡಬ್​ ಮಾಡಲು ಸಮಯ ಇರಲಿಲ್ಲ ಎಂಡು ಉಡಾಫೆ ಉತ್ತರ ನೀಡಿದ್ದಾರೆ. ಹೀಗಾಗಿ ಪ್ರತಿಹಂತದಲ್ಲೂ ಪುಷ್ಪ ಸಿನಿಮಾ ಕನ್ನಡಿಗರಿಗೆ ಅವಮಾನ ಮಾಡಿಕೊಂಡು ಬರುತ್ತಿದೆ. (ದಿಗ್ವಿಜಯ ನ್ಯೂಸ್​)

    ನಾವು ಯಾವತ್ತೂ ಬಿಟ್ಟುಕೊಡಬಾರದು: ರಶ್ಮಿಕಾ ಮಂದಣ್ಣಗೆ ಟಾಂಗ್​ ಕೊಟ್ಟ ರಚಿತಾ ರಾಮ್!

    ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲೂ ನಟಿಸ್ತೀನಿ: ಪುಷ್ಪ ಗುಂಗಲ್ಲಿ ಶ್ರೀವಲ್ಲಿ ರಶ್ಮಿಕಾ ಜತೆ ಮಾತುಕತೆ

    ಆನಗೆ ಪುಷ್ಪಾ ಪೈಪೋಟಿ: ಎರಡೂ ಸಿನಿಮಾ ಒಂದೇ ದಿನ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts