More

    ಆನಗೆ ಪುಷ್ಪಾ ಪೈಪೋಟಿ: ಎರಡೂ ಸಿನಿಮಾ ಒಂದೇ ದಿನ ಬಿಡುಗಡೆ

    ‘ನಮ್ಮ ಅಪ್ಪನ ಮನೆಯಲ್ಲಿ ಇದ್ದುದ್ದನ್ನು ತಿನ್ನೋದಕ್ಕೆ ಪಕ್ಕದ ಮನೆಯವರನ್ನು ಕೇಳಬೇಕಾದ ಪರಿಸ್ಥಿತಿ ಬಂದೊದಗಿದೆ. ಇದೆಂಥ ದುರಂತ …’ ಹೀಗೆ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ ಅದಿತಿ ಪ್ರಭುದೇವ. ಇಂದು ಅವರ ‘ಆನ’ ಚಿತ್ರ ಬಿಡುಗಡೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಅದಿತಿ ಇಷ್ಟೊಂದು ಗರಂ ಆಗಿದ್ದಾದರೂ ಏಕೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಕಾರಣ ‘ಪುಷ್ಪ’ ಸಿನಿಮಾ!

    ಏಕಕಾಲದಲ್ಲಿ, ‘ಆನ’ ಮತ್ತು ‘ಪುಷ್ಪ’ ಸಿನಿಮಾಗಳು ಇಂದು (ಡಿ. 17) ಬಿಡುಗಡೆ ಆಗುತ್ತಿವೆ. ಬಹುಪಾಲು ತೆರೆಗಳನ್ನು ‘ಪುಷ್ಪ’ ಪಡೆದಿರುವುದರಿಂದ ‘ಆನ’ ಚಿತ್ರಕ್ಕೆ ಚಿತ್ರಮಂದಿರಗಳ ಕೊರತೆ ಎದುರಾಗಿದೆ. ‘ನಮ್ಮ ರಾಜ್ಯದಲ್ಲಿ ನಮ್ಮ ಸಿನಿಮಾಗಳಿಗೇ ಥಿಯೇಟರ್​ಗಳಿಲ್ಲ …’ ಎಂದು ತಂಡ ಅಸಮಾಧಾನ ಹೊರಹಾಕಿದೆ. ಅದರ ಜತೆಗೆ ಸಿನಿಮಾದಲ್ಲೇನಿರಲಿದೆ ಎಂಬ ಬಗ್ಗೆಯೂ ಅದಿತಿ ಹೇಳಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿಯೇ ವಿಶೇಷ ಸಿನಿಮಾ ಎಂದು ಹೇಳಿಕೊಳ್ಳುವ ಅದಿತಿ, ‘‘ಆನ’ ಸಿನಿಮಾ ನನ್ನ ಪಾಲಿನ ವಿಶೇಷ ಸಿನಿಮಾಗಳಲ್ಲೊಂದು. ಇಲ್ಲಿಯವರೆಗೂ ನಾನು ಕಾಣಿಸಿಕೊಳ್ಳದ ಮತ್ತು ನನಗೆ ಅಷ್ಟೇ ಸವಾಲೆನಿಸುವ, ಆಪ್ತ ಎನಿಸುವ ಪಾತ್ರವದು. ನಾಯಕನ ಜತೆಗೆ ಹೆಜ್ಜೆ ಹಾಕುತ್ತ ಇದ್ದವಳಿಗೆ ಈ ತರಹದ ಪಾತ್ರ ಸಿಕ್ಕಾಗ ಆಗುವ ಖುಷಿಯೇ ಬೇರೆ. ಸೈನ್ಸ್ ಫಿಕ್ಷನ್ ಅನಿಸಿದರೂ, ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ’ ಎನ್ನುತ್ತಾರೆ ಅದಿತಿ.

    ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ ಅದಿತಿಗೂ ಈ ಚಿತ್ರದಲ್ಲಿನ ಅದಿತಿಗೂ ತುಂಬ ವ್ಯತ್ಯಾಸಗಳಿವೆಯಂತೆ. ‘3 ಗೆಟಪ್​ಗಳಲ್ಲಿ ನನ್ನನ್ನು ನೋಡಬಹುದು. ಕಾಸ್ಟೂಮ್ ಸಹ ಅಷ್ಟೇ ವಿಶೇಷವಾಗಿವೆ’ ಎನ್ನುವ ಅದಿತಿ, ‘ಇದೇ ಚಿತ್ರದ 2ನೇ ಭಾಗದ ಪ್ಲಾನ್ ಸಹ ನಡೆಯುತ್ತಿದೆ’ ಎಂದೂ ಹೇಳಿಕೊಂಡರು. ಮನೋಜ್ ಪಿ ನಡುಲುಮನೆ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

    ವಿವಾದದ ಕಿಡಿ ಹೊತ್ತಿಸಿದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಮಾತು…

    ಸರ್ಕಲ್​ವೊಂದಕ್ಕೆ ಸಿಡಿಸಿ ಬಿಪಿನ್​ ರಾವತ್ ಹೆಸರಿಡಲು ವಿರೋಧ; ನಾವು ಈಗಾಗಲೇ ಇಸ್ಲಾಂಪುರ ಎಂದಿಟ್ಟಿದ್ದೇವೆ ಎಂದು ತಗಾದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts