ರೇಬೀಸ್​... ಸಣ್ಣ ಗಾಯ ಉಸಿರನ್ನೇ ನಿಲ್ಲಿಸಿಬಿಡುತ್ತೆ ಏಕೆ? ನೀವಿದನ್ನು ತಿಳಿದುಕೊಳ್ಳಲೇಬೇಕು? Rabies

Rabies
Published on

Rabies : ರೇಬೀಸ್ ಒಂದು ಮಾರಕ ವೈರಲ್ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ನಾಯಿಗಳು, ಮಂಗಗಳು, ಬೆಕ್ಕುಗಳು ಮತ್ತು ಬಾವಲಿಗಳಂತಹ ಪ್ರಾಣಿಗಳ ಲಾಲಾರಸದ ಮೂಲಕ ಮನುಷ್ಯರಿಗೆ ಹರಡುತ್ತದೆ. ನಾಯಿ ಕಡಿತ ಅಥವಾ ಗೀರುಗಳಂತಹ ಸಣ್ಣ ಗಾಯವೂ ಸಹ ಈ ಭಯಾನಕ ಕಾಯಿಲೆಗೆ ಕಾರಣವಾಗಬಹುದು. ಏಕೆಂದರೆ, ರೇಬೀಸ್ ವೈರಸ್ ನೇರವಾಗಿ ನಮ್ಮ ನರಮಂಡಲದ ಮೇಲೆಯೇ ದಾಳಿ ಮಾಡುತ್ತದೆ.

ರೇಬೀಸ್​​ ಕಾಯಿಲೆ ಬಂದಾಗ ಆರಂಭದಲ್ಲಿ ತಲೆತಿರುಗುವಿಕೆ, ಜ್ವರ ಮತ್ತು ನೀರು ಕುಡಿಯಲು ಹೆದರುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಅತಿಯಾದರೆ, ನಂತರ ಅದು ಕೋಮಾಕ್ಕೆ ಹೋಗಿ ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ. ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ, ಚಿಕಿತ್ಸೆ ನೀಡುವುದು ಅಸಾಧ್ಯ, ಅದಕ್ಕಾಗಿಯೇ ರೇಬೀಸ್ ಬರದಂತೆ ತಡೆಗಟ್ಟುವುದೇ ಉತ್ತಮ ಮಾರ್ಗವಾಗಿದೆ.

ದುರಾದೃಷ್ಟಕರ ಘಟನೆ

ಇತ್ತೀಚೆಗೆ ಒಂದು ದುರಂತ ಘಟನೆ ತೆಲಂಗಾಣಾ ರಾಜ್ಯದ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆದಿದೆ. ನಾಯಿ ಕಚ್ಚಿ ತನ್ನ ಮಗುವಿಗೆ ರೇಬೀಸ್ ಬಂದಿರಬಹುದೆಂದು ಹೆದರಿದ ತಾಯಿಯೊಬ್ಬರು ಮಗುವಿನೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಂಡರು. 2025ರ ಆಗಸ್ಟ್​ 26ರಂದು ಈ ಘಟನೆ ನಡೆಯಿತು.

ತಾಯಿಗೆ ರೇಬೀಸ್ ಬಗ್ಗೆ ಸಂಪೂರ್ಣ ಜ್ಞಾನವಿಲ್ಲದ ಕಾರಣ ಮತ್ತು ಸರಿಯಾದ ಸಮಯದಲ್ಲಿ ವೈದ್ಯಕೀಯ ಸಹಾಯ ಪಡೆಯದ ಕಾರಣ ಈ ದುಷ್ಕೃತ್ಯ ಸಂಭವಿಸಿದೆ. ಈ ರೀತಿಯ ಘಟನೆಗಳು ಜನರು ರೇಬೀಸ್ ಬಗ್ಗೆ ಎಷ್ಟು ಜಾಗೃತರಾಗಿರಬೇಕು ಎಂಬುದನ್ನು ತೋರಿಸುತ್ತದೆ. ಭಯದಿಂದ ಜೀವ ತೆಗೆಯುವುದು ಪರಿಹಾರವಲ್ಲ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ರೇಬೀಸ್ ಅನ್ನು ಗುಣಪಡಿಸಬಹುದು.

ಚಿಕಿತ್ಸೆ ಮತ್ತು ತಡೆಗಟ್ಟುವಿಕೆ

ನಾಯಿ ಅಥವಾ ಯಾವುದಾದರೂ ಪ್ರಾಣಿ ಕಚ್ಚಿದಾಗ ಮೊದಲ ಹೆಜ್ಜೆ ಗಾಯವನ್ನು ಸ್ವಚ್ಛಗೊಳಿಸುವುದು ಮತ್ತು ನಂತರ ಅದನ್ನು ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯುವುದು. ಇದು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಾದ ಬಳಿಕ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಪ್ರಾಣಿ ಕಚ್ಚಿದರೆ, ವಿಳಂಬವಿಲ್ಲದೆ ವೈದ್ಯರನ್ನು ಸಂಪರ್ಕಿಸಿ, ಲಸಿಕೆ ಹಾಕಿಸಿಕೊಳ್ಳುವುದು ತುಂಬಾನೇ ಮುಖ್ಯ. ವೈದ್ಯರ ಸಲಹೆಯ ಮೇರೆಗೆ ರೇಬೀಸ್ ಲಸಿಕೆಯನ್ನು ನೀಡಬೇಕು. ಈ ಲಸಿಕೆಯನ್ನು ಕೆಲವು ಪ್ರಮಾಣದಲ್ಲಿ ಕೆಲವು ದಿನಗಳ ಅಂತರದಲ್ಲಿ ನೀಡಲಾಗುತ್ತದೆ.

ಪ್ರಮುಖ ಅಂಶ

ಲಕ್ಷಣಗಳು ಕಾಣಿಸಿಕೊಂಡ ನಂತರ ರೇಬೀಸ್‌ಗೆ ಚಿಕಿತ್ಸೆ ನೀಡುವುದು ತುಂಬಾ ಕಷ್ಟ. ಅದಕ್ಕಾಗಿಯೇ ವಿಳಂಬವಿಲ್ಲದೆ ಲಸಿಕೆ ಹಾಕುವುದು ಸರಿಯಾದ ಮಾರ್ಗವಾಗಿದೆ. ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಹಾಕುವುದು ಸಹ ಬಹಳ ಮುಖ್ಯ.

ಗಮನಿಸಿ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಪ್ರಾಣಿ ಕಚ್ಚಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net