ಯೂಟ್ಯೂಬ್​ನಿಂದ ಮಹತ್ವದ ನಿರ್ಧಾರ: ಇನ್ಮುಂದೆ ಯೂಟ್ಯೂಬ್​ ವಿಡಿಯೋಗಳ ಕೆಳಗೆ ಇದು ಕಾಣಲ್ಲ!

Youtube
Published on

ನವದೆಹಲಿ: ಇತರೆ ಸಾಮಾಜಿಕ ಜಾಲತಾಣ ರೀತಿಯಲ್ಲೇ ವಿಡಿಯೋ ಡಿಸ್​ಲೈಕ್​ ಕೌಂಟ್​ ಅನ್ನು ತೆಗೆದುಹಾಕಲು ಯೂಟ್ಯೂಬ್​ ನಿರ್ಧಾರ ಮಾಡಿದೆ. ಹೊಸ ಯೂಟ್ಯೂಬ್​ ಕ್ರಿಯೆಟರ್ಸ್​ಗಳ ಮೇಲೆ ಡಿಸ್​ಲೈಕ್​ ದಾಳಿ ನಡೆಯುತ್ತಿರುವುದನ್ನು ಕಂಪನಿ ಗಮನಿಸಿದ್ದು, ಅದಕ್ಕೆ ಬ್ರೇಕ್​ ಹಾಕಲು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಟ್ವೀಟ್​ ಮೂಲಕ ಯೂಟ್ಯೂಬ್​ ಕಂಪನಿ ಈ ನಿರ್ಧಾರವನ್ನು ಘೋಷಣೆ ಮಾಡಿದೆ. ಕ್ರಿಯೆಟರ್ಸ್​ ಮೇಲೆ ಡಿಸ್​ಲೈಕ್​ ದಾಳಿಗಳು ನಡೆಯುತ್ತಿದ್ದು, ಕ್ರಿಯೆಟರ್ಸ್​ ಮೇಲೆ ಪ್ರಭಾವ ಬೀರುವುದರಿಂದ ಅದನ್ನು ಕಡಿಮೆ ಮಾಡಲು ಡಿಸ್​ಲೈಕ್​ ಕೌಂಟ್​ ತೆಗೆದುಹಾಕಲು ನಿರ್ಧರಿಸಲಾಗಿದೆ. ಸಾಕಷ್ಟು ಸಂಶೋಧನೆ ಹಾಗೂ ಪರೀಕ್ಷೆಯ ಬಳಿಕ ಈ ನಿರ್ಧಾರವನ್ನು ಪರಿಗಣಿಸಲಾಗಿದೆ ಎಂದು ಯೂಟ್ಯೂಬ್​ ಟ್ವೀಟ್​ನಲ್ಲಿ ತಿಳಿಸಿದೆ.

ಡಿಸ್​ಲೈಕ್​ ಬಟನ್​ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಬದಲಾಗಿ ಡಿಸ್​ಲೈಕ್​ ಕೌಂಟ್​ ಮಾತ್ರ ಸಾರ್ವಜನಿಕವಾಗಿ ಕಾಣದಂತೆ ಕಂಪನಿ ಮರೆಮಾಚಲಿದೆ. ಇಷ್ಟವಿಲ್ಲದವರು ಡಿಸ್​ಲೈಕ್ಸ್​ ಮಾಡಬಹುದು. ಆದರೆ, ಎಷ್ಟು ಡಿಸ್​ಲೈಕ್​ ಆಗಿದೆ ಎಂಬುದು ಇನ್ಮುಂದೆ ಕಾಣುವುದಿಲ್ಲ. ಆದರೆ, ಕ್ರಿಯೆಟರ್ಸ್​ ಫೀಡ್​ಬ್ಯಾಕ್​ಗಾಗಿ ಡಿಸ್​ಲೈಕ್​ ಕೌಂಟ್ ಅವರಿಗೆ ಮಾತ್ರ​ ಕಾಣಲಿದೆ. ಸಾರ್ವಜನಿಕ ಅವಮಾನ ಮತ್ತು ಕಿರುಕುಳ ತಪ್ಪಿಸಲು ಇದು ಸಹಕಾರಿ ಆಗಲಿದೆ ಎಂದು ಯೂಟ್ಯೂಬ್​ ಹೇಳಿದೆ.

ಯೂಟ್ಯೂಬ್​​ ಮಾತ್ರವಲ್ಲ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಕೂಡ ಡಿಸ್​ಲೈಕ್​ ಆಯ್ಕೆಯನ್ನು ಮರೆಮಾಚಿದೆ. ಇದರಿಂದ ಬಳಕೆದಾರರ ಮೇಲಿನ ಕಿರುಕುಳ ತಪ್ಪಿ, ಮಾನಸಿಕ ಆರೋಗ್ಯಕ್ಕೆ ಸಹಕಾರಿ ಆಗಲಿದೆ ಎಂಬುದು ಕಂಪನಿಗಳ ಉದ್ದೇಶವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net