ಮಕ್ಕಳನ್ನು ಬಿಟ್ಟು ಭಾವನೊಂದಿಗೆ ಪರಾರಿಯಾದ ಮಹಿಳೆಗೆ ಮಾರ್ಗ ಮಧ್ಯೆಯೇ ಕಾದಿತ್ತು ಬಿಗ್​ ಶಾಕ್..!​

Woman Kerala
Published on

ಎರವಿಪುರಂ(ಕೊಲ್ಲಂ): ಮಕ್ಕಳನ್ನು ಬಿಟ್ಟು ಭಾವನೊಂದಿಗೆ ಪರಾರಿಯಾಗಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ಕೊಲ್ಲಂನ ಮುಂಡಕ್ಕಲ್​ ನಿವಾಸಿ ಐಶ್ವರ್ಯಾ (28) ಮತ್ತು ಆಕೆಯ ಸಹೋದರಿಯ ಗಂಡ ಸಂಜಿತ್​ (36) ಎಂಬಾತನನ್ನು ಮದುರೈನಲ್ಲಿ ಬಂಧಿಸಲಾಗಿದೆ. ಸಂಜಿತ್​ಗೆ ಇಬ್ಬರು ಮಕ್ಕಳಿದ್ದು, ಐಶ್ವರ್ಯಾಗೆ ಒಂದು ಮಗುವಿದೆ. ಮಕ್ಕಳನ್ನು ಬಿಟ್ಟು ಹೋಗಿದ್ದಕ್ಕೆ ಇಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ.

ಐಶ್ವರ್ಯಾ ನಾಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಎರವಿಪುರಂ ಪೊಲೀಸ್​ ಠಾಣೆಯಲ್ಲಿ ಮತ್ತು ಆಕೆಯ ಸಂಬಂಧಿಕರು ಕೊಲ್ಲಂ ವೆಸ್ಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಕೊಲ್ಲಂ ವೆಸ್ಟ್ ಪೊಲೀಸರು ಸೈಬರ್​ ಸೆಲ್​ ಪೊಲೀಸರ ಸಹಾಯದಿಂದ ತನಿಖೆ ನಡೆಸಿ, ಇಬ್ಬರು ಪತ್ತೆ ಹಚ್ಚಿದ್ದಾರೆ. ಇಬ್ಬರು ನಕಲಿ ಹೆಸರಿನಲ್ಲಿ ಟಿಕೆಟ್​ ಪಡೆದ ಮದುರೈಗೆ ಪ್ರಯಾಣ ಬೆಳೆಸಿದ್ದರು.

ರೈಲ್ವೇ ಪೊಲೀಸರು ಇಬ್ಬರ ಫೋಟೋಗಳನ್ನು ಕಳುಹಿಸಿದ ಬಳಿಕ ಐಶ್ವರ್ಯಾ ಮತ್ತು ಸಂಜಿತ್​ ಸಿಕ್ಕಿಬಿದ್ದಿದ್ದಾರೆ. ಬಳಿಕ ವೆಸ್ಟ್​ ಪೊಲೀಸರು ಮದುರೈಗೆ ತೆರಳಿ ಇಬ್ಬರನ್ನು ಕರೆತಂದಿದ್ದಾರೆ. ಇದಾದ ಬಳಿಕ ಇಬ್ಬರನ್ನು ಎರವಿಪುರಂ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net