ಪತಿಗೆ ವಿವಾಹೇತರ ಸಂಬಂಧವಿದೆ ಎಂದು ಬಿಂಬಿಸಲು ಸಂಚು ರೂಪಿಸಿ ಸಿಕ್ಕಿಬಿದ್ದ ಖತರ್ನಾಕ್​ ಪತ್ನಿ..!

Klr Woman
Published on

ತ್ರಿಸ್ಸೂರು: ಗಂಡನ ಕಾಲು ಕತ್ತರಿಸಿ ಆತನನ್ನು ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಮಹಿಳೆಯನ್ನು ಕೇರಳದ ನೆಡುಪುಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ನಯನಾ (30) ಎಂದು ಗುರುತಿಸಲಾಗಿದೆ. ಕೋರ್ಕೆಂಚೆರಿ ನಿವಾಸಿಯಾಗಿರುವ ಗಂಡ ಸಿ.ಪಿ. ಪ್ರಮೋದ್​ನ ಮೇಲೆ ಹಲ್ಲೆ ಮಾಡಲು ಗ್ಯಾಂಗ್​ ಒಂದಕ್ಕೆ ನಯನಾ ಸುಪಾರಿ ನೀಡಿದ್ದಳು. ಈ ಪ್ರಕರಣದಲ್ಲಿ ನಯನಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಜಾಮೀನು ನೀಡಲಾಗಿದೆ. ಆದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ಆಕೆಯ ಮತ್ತು ಗಂಡನ ನಡುವೆ ಬಾಕಿ ಪ್ರಕರಣವಿದೆ.

ತನ್ನ ಗಂಡನ ಮೇಲೆ ಹಲ್ಲೆ ನಡೆಸಿ ಆತನಿಗೆ ವಿವಾಹೇತರ ಸಂಬಂಧವಿದೆ ಎಂದು ಬಿಂಬಿಸಲು ಹಾಗೂ ಆತನನ್ನು ಡ್ರಗ್ಸ್​ ಕೇಸ್​ನಲ್ಲಿ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಗ್ಯಾಂಗ್‌ ಒಂದನ್ನು ನಯನಾ ಸಂಪರ್ಕಿಸಿದ್ದಳು. ಬಳಿಕ ಪ್ಲಾನ್​ನಂತೆಯೇ ಗಂಡನ ಮೇಲೆ ಹಲ್ಲೆ ಮಾಡಿಸಿದ್ದಳು.

ನಯನಾಳ ಪತಿ ಪ್ರಮೋದ್​, ಕಳೆದ ಏಪ್ರಿಲ್​ನಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರಿಗೆ ಬಂದ ಸಂದೇಶವನ್ನು ಆಧರಿಸಿ ನಯನಾಳನ್ನು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net