ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

ಕೊಚ್ಚಿ: ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಎಲ್ಲಾ ವೈದ್ಯರು ಬರವಣಿಗೆ ಅಸ್ಪಷ್ಟವಾಗಿರುತ್ತದೆ ಎಂದು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇರಳದ ಮಕ್ಕಳ ತಜ್ಞರೊಬ್ಬರು ಬರೆದಿರುವ ಔಷಧ ಚೀಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಕೇರಳದ ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಡಾ. ನಿತಿನ್ ನಾರಾಯಣನ್ ಅವರು ತಮ್ಮ ಔಷಧ ಚೀಟಿಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಆಗುತ್ತಿದ್ದಾರೆ. ಇರಿಂಜಲಕುಡ ಬಳಿಯ ತ್ರಿಶೂರ್‌ನ ಪಡಿಯೂರಿನವರಾದ ಇವರು ಕಳೆದ ಮೂರು ವರ್ಷಗಳಿಂದ ಸಿಎಚ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವೈದ್ಯರು ಔಷಧ ಚೀಟಿಗಳನ್ನು ಬ್ಲಾಕ್ ಲೆಟರ್‌ಗಳಲ್ಲಿ ಬರೆಯಬೇಕು ಎಂದು ವಿವಿಧ ಏಜೆನ್ಸಿಗಳು ಕಡ್ಡಾಯಗೊಳಿಸಿದ್ದರೂ, ಇನ್ನೂ ಅನೇಕರು ಅದನ್ನು ಪಾಲಿಸದೇ ಅಸ್ಪಷ್ಟ ಬರಹವನ್ನೇ ಮುಂದುವರಿಸಿದ್ದಾರೆ. ಆದರೆ, ನಿತಿನ್ ನಾರಾಯಣನ್ ಅವರು ಇದಕ್ಕೆ ತದ್ವಿರುದ್ಧವಾಗಿದ್ದು, ಔಷಧ ಚೀಟಿಯಲ್ಲಿ ತುಂಬಾ ಸ್ಪಷ್ಟವಾಗಿ ಕಾಣುವಂತೆ ಬ್ಲಾಕ್​ ಲೆಟರ್​ಗಳಲ್ಲಿಯೇ ಬರೆಯುತ್ತಿದ್ದಾರೆ.

ಬಾಲ್ಯದಿಂದಲೂ ನಿತಿನ್​ ಅವರು ಉತ್ತಮ ಕೈಬರಹದ ಕೌಶಲ್ಯವನ್ನು ಹೊಂದಿದ್ದಾರೆ. ಕಾಪಿಬುಕ್ ಅಭ್ಯಾಸಗಳು ನನಗೆ ಸಹಾಯ ಮಾಡಿತು ಮತ್ತು ಅಧ್ಯಯನಗಳು ಮುಗಿದ ನಂತರವೂ ನಾನು ಬರವಣಿಗೆಯ ಶೈಲಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ಡಾ. ನಿತಿನ್ ಅವರು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿದರು ಮತ್ತು ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆ್ಯಂಡ್​ ರಿಸರ್ಚ್ (ಜಿಐಪಿಎಂಇಆರ್​) ನಿಂದ ಎಂಡಿ ಪಡೆದಿದ್ದಾರೆ. (ಏಜೆನ್ಸೀಸ್​)

ಈವರೆಗೂ ನೋಡಿರದ ಮೀರಾ ಜಾಸ್ಮಿನ್ ಹಾಟ್​ ಅವತಾರ! ಮಲಯಾಳಿ ಬ್ಯೂಟಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ

ಪುತಿನ್ ಆದೇಶ ಜನರ ಆತಂಕ

ಕನ್ನಡಿಗರಿಗೆ ಉದ್ಯೋಗ ಮೀಸಲು

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ