More

    ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​

    ನವದೆಹಲಿ: ತಾರಾದಂಪತಿ ನಿಕ್​ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವುದಾಗಿ ಖಚಿತಪಡಿಸಿದ್ದಾರೆ.

    ನಿಕ್​ ಮತ್ತು ಪಿಗ್ಗಿ ತಂತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ಫ್ಯಾನ್ಸ್​ ಮತ್ತು ಫಾಲೋವರ್ಸ್​ಗೆ ಈ ವಿಚಾರವನ್ನು ತಿಳಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ನಾವು ಮಗುವನ್ನು ಪಡೆದಿರುವ ವಿಚಾರವನ್ನು ತಿಳಿಸಲು ನಮಗೆ ಅತೀವ ಆನಂದವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಮ್ಮ ಕುಟುಂಬದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ ನಮ್ಮ ಗೌಪ್ಯತೆ ಕಾಪಾಡುವಂತೆ ಗೌರವದಿಂದ ಕೇಳಿಕೊಳ್ಳುತ್ತೇವೆ. ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಪ್ರಿಯಾಂಕಾ ತಿಳಿಸಿದ್ದು, ನಿಕ್​ ಕೂಡ ಇದೇ ಪೋಸ್ಟ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ.

    ಪ್ರಿಯಾಂಕಾ ಅವರಿಗಿಂತಲೂ ನಿಕ್​ ಜೋನಸ್​ 11 ವರ್ಷ ಕಿರಿಯರು. ಇದೇ ವಿಚಾರ ಮದುವೆ ಸಮಯದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಯಾವುದೇ ಟೀಕೆಗೂ ಚಿಂತಿಸದ ಪಿಗ್ಗಿ, 2018ರ ಡಿಸೆಂಬರ್​ 1ರಂದು ಅಮೆರಿಕ ಪಾಪ್​ ಗಾಯಕ ನಿಕ್ ಜೋನಾಸ್​​ರನ್ನು ಮದುವೆ ಆಗುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿದ್ದರು. ಅಲ್ಲದೆ, ಇಬ್ಬರು ಅನೋನ್ಯವಾಗಿ ಜೀವನ ಸಹ ಸಾಗಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡುತ್ತಾ ಬಂದಿದ್ದಾರೆ. (ಏಜೆನ್ಸೀಸ್​)

    ಯೂಟ್ಯೂಬ್​ ವಿಡಿಯೋಗಳೆಲ್ಲ ನಿಜವೆಂದು ನಂಬಿದ್ರೆ ನಿಮಗೂ ಇದೇ ಗತಿ ಆಗ್ಬಹುದು ಹುಷಾರ್..!​​

    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಪ್ರಿಯಾಂಕಾ ನಾಯಕತ್ವ: ಯುವ ಸಮುದಾಯ ಕೇಂದ್ರೀಕೃತ ಕೈ ಪ್ರಣಾಳಿಕೆ

    ಪದವಿಯಲ್ಲಿ ಐಚ್ಛಿಕ ವಿಷಯ ಕಡ್ಡಾಯ: ಶಿಕ್ಷಕರ ನೇಮಕಾತಿ ಕರಡು ನಿಯಮ ಪ್ರಕಟ, ಪದವಿಯಲ್ಲಿ ಕಲಿತರಷ್ಟೇ ಕೆಲಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts