More

    ಪದವಿಯಲ್ಲಿ ಐಚ್ಛಿಕ ವಿಷಯ ಕಡ್ಡಾಯ: ಶಿಕ್ಷಕರ ನೇಮಕಾತಿ ಕರಡು ನಿಯಮ ಪ್ರಕಟ, ಪದವಿಯಲ್ಲಿ ಕಲಿತರಷ್ಟೇ ಕೆಲಸ

    ಬೆಂಗಳೂರು: ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿಗೆ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾಷಾ ವಿಷಯ ಕುರಿತ ನಿಯಮವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಭಾಷಾ ವಿಷಯ ಬೋಧಿಸುವ ಶಿಕ್ಷಕರು, ಪದವಿಯಲ್ಲಿ ಆ ವಿಷಯವನ್ನು ಐಚ್ಛಿಕವಾಗಿ ವ್ಯಾಸಂಗ ಮಾಡಿರುವುದು ಕಡ್ಡಾಯ ಎಂದು ಉಲ್ಲೇಖಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರವನ್ನು ಬೋಧಿಸಲು ಪದವಿಯಲ್ಲಿ ಮೂರು ವರ್ಷ ಈ ವಿಷಯಗಳನ್ನು ಓದಿರಬೇಕಾಗುತ್ತದೆ.

    ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ)(ವಿಶೇಷ) ನಿಯಮ 2022 ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಬಾರಿ ಎಲ್ಲ ವಿಷಯದ ಪದವೀಧರರಿಗೂ ಅವಕಾಶ ಕಲ್ಪಿಸಿದ್ದು, ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್​ಇಪಿ) ಪೂರಕವಾಗಿ ರೂಪಿಸಲಾಗಿದೆ. ಇದು 6 ರಿಂದ 8ನೇ ತರಗತಿಗೆ ಬೋಧಿಸುವ ಶಿಕ್ಷಕರ ನೇಮಕಕ್ಕಾಗಿ ರೂಪಿಸಿರುವ ಕರಡಾಗಿದೆ.

    ಈ ಮೊದಲು ಟಿಸಿಎಚ್, ಪಿಯುಸಿ, ಬಿಇಡಿ ಇದ್ದರೆ, ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು. ಇದೀಗ ಈ ನಿಯಮ ಬದಲು ಮಾಡಲಾಗಿದೆ. ನೇಮಕಾತಿ ವೇಳೆ ನೇಮಕಾತಿ ಪ್ರಾಧಿಕಾರ ರಚಿಸಿಕೊಳ್ಳಬೇಕಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಇದರ ಅಧ್ಯಕ್ಷರು, ಇಲಾಖೆಯ ಇತರೆ ನಿರ್ದೇಶಕರು ಸದಸ್ಯರಾಗಿರುತ್ತಾರೆ. ವೇತನ 14,550ರಿಂದ 26,700 ರೂ. ನಿಗದಿ ಪಡಿಸಿದೆ. ನೇಮಕಾತಿ ವೇಳೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇ. 50 ಅನುಪಾತಕ್ಕೆ ಪರಿಗಣಿಸಲಿದೆ. ಅದೇ ರೀತಿ ಟಿಇಟಿ ಮತ್ತು ಪದವಿ ಶೇ. 20 ಹಾಗೂ ಬಿ.ಇಡಿ ಕೋರ್ಸ್​ನಲ್ಲಿ ಶೇ.10 ಅಂಕಗಳನ್ನು ಲೆಕ್ಕಹಾಕಿ ಆಯ್ಕೆ ಪಟ್ಟಿ ಸಿದ್ಧ ಪಡಿಸಲಿದೆ.

    ಒಂದು ವೇಳೆ ಅಭ್ಯರ್ಥಿಯು 4 ವರ್ಷ ಪದವಿ ಹೊಂದಿದ್ದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ಶೇ.50 ಮತ್ತು ಟಿಇಟಿನಲ್ಲಿ ಶೇ.20 ಹಾಗೂ 4 ವರ್ಷದ ಪದವಿಯಲ್ಲಿ ಶೇ.30 ಅಂಕಗಳಂತೆ ಪರಿಗಣಿಸಲು ನಿರ್ಧರಿಸಲಾಗಿದೆ.

    ಆಕ್ಷೇಪಣೆಗೆ ಅವಕಾಶ: ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು 15 ಸಾವಿರ ಶಿಕ್ಷಕರ ನೇಮಕದ ಘೋಷಣೆ ಮಾಡಿದ್ದರು. ಈಗ ಕರಡು ನಿಯಮಗಳನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಎಂ.ಎಸ್. ಬಿಲ್ಡಿಂಗ್, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು 560001 ಈ ವಿಳಾಸಕ್ಕೆ ಕಳುಹಿಸಬಹುದು.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts