ಕೆಲ್ಸ ಮುಗಿಸಿ ಬೆಳಗ್ಗೆ ಮನೆಗೆ ಬಂದವನು ಪತ್ನಿ, ಮಕ್ಕಳ ಸ್ಥಿತಿ ಕಂಡು ಕುಸಿದುಬಿದ್ದ: ನಡೆದಿತ್ತು ಘೋರ ದುರಂತ!

AP Woman 1
Published on

ವಿಜಯವಾಡ: ಮಕ್ಕಳಿಗೆ ವಿಷ ಕೊಟ್ಟು ತಾನು ಕುಡಿದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಸುರೇಂದ್ರ ಎಂಬಾತ ತನ್ನ ಪತ್ನಿ ಮತ್ತು ಇಬ್ಬರು ಪುಟ್ಟು ಹೆಣ್ಣು ಮಕ್ಕಳೊಂಡಿಗೆ ಕೊಟಗಟ್ಟು ಕೇಂದ್ರದಲ್ಲಿ ವಾಸವಿದ್ದರು. ಸುರೇಂದ್ರ ಜೀವನ ನಿರ್ವಹಣೆಗಾಗಿ ಬೆಳಗ್ಗೆ ದಿನಸಿ ವ್ಯವಹಾರ ಹಾಗೂ ರಾತ್ರಿ ಆಟೋ ಓಡಿಸುತ್ತಿದ್ದರು. ಆದಾಗ್ಯು ತಮ್ಮ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಿರಲಿಲ್ಲ.

ಇದರಿಂದ ಹತಾಶೆಗೊಂಡ ಸುರೇಂದ್ರ ಪತ್ನಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಳು. ಗಂಡನಿಲ್ಲದ ವೇಳೆ ತಾನೂ ವಿಷ ಕುಡಿದು, ಪುಟ್ಟ ಮಕ್ಕಳಿಗೂ ಕುಡಿಸಿದ್ದಾಳೆ. ಸೋಮವಾರ ಬೆಳಗ್ಗೆ ಸುರೇಂದ್ರ ಕೆಲಸದಿಂದ ಬಂದಾಗ ಪತ್ನಿ ಹಾಗೂ ಮಕ್ಕಳ ಬಾಯಲ್ಲಿ ನೊರೆಯನ್ನು ನೋಡಿ ಹೆದರಿ ತಕ್ಷಣ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆದರೆ, ತುಂಬಾ ಸಮಯ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ. ಇತ್ತ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡ ಸುರೇಂದ್ರ ಏಕಾಂಗಿಯಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net