ಸೆಲ್ಫಿ ತೆಗೆಯುವಾಗ ಕಾಲುಜಾರಿ ಕಾಳಿ ನದಿ ಪಾಲಾಗಿದ್ದ ಯುವ ಜೋಡಿ ಶವವಾಗಿ ಪತ್ತೆ

Selfie Tragidy 1
Published on

ಜೊಯಿಡಾ: ಬೀದರ್ ನಿಂದ ಆಗಮಿಸಿದ ಯುವ ಜೋಡಿ ಸೋಮವಾರ ಕಾಳಿ ಪಾಲಾಗಿದ್ದು, ಮಂಗಳವಾರ ಇಬ್ಬರ ಬೆಳಗ್ಗೆ ಶವ ಪತ್ತೆಯಾಗಿದೆ.

ಬೀದರ್ ನ ಕರ್ನಾಟಕ ಕಾಲೇಜ್ ನ ಬಿಎ ವಿದ್ಯಾರ್ಥಿ ಪುರುಷೋತ್ತಮ ಪಾಟೀಲ ಹಾಗೂ ಬೀದರ್ ಮೂಲದ ಕಲಬುರ್ಗಿಯಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವ ರಕ್ಷಿತಾ ಎಸ್. ಮೃತರು.

ಸೋಮವಾರ ದಾಂಡೇಲಿಯಿಂದ ಆಟೋ ರಿಕ್ಷಾ ಮೇಲೆ ಬಂದಿದ್ದ ಜೋಡಿ ಅಂಬಿಕಾ ನಗರದ ಸೂಪಾ ಅಣೆಕಟ್ಟೆಯ ಸಮೀಪ ಇರುವ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದಿದ್ದರು. ಸೇತುವೆ ಮೇಲೆ ಸಿಕ್ಕ ಯುವತಿಯ ಮೊಬೈಲ್ ಆಧಾರದ ಮೇಲೆ ಆಕೆಯ ಮನೆಗೆ ಕರೆ ಮಾಡಿ ಗುರುತು ತಿಳಿದುಕೊಳ್ಳಲಾಗಿತ್ತು.

ಮಂಗಳವಾರ ಬೆಳಗ್ಗೆ ಫ್ಲೈ ಕ್ಯಾಚರ್ ಎಂಬ ರ್ಯಫ್ಟಿಂಗ್ ತಂಡದ ಸದಸ್ಯರು ಇಬ್ಬರ ಶವಗಳನ್ನು ಕಾಳಿ ನದಿಯಿಂದ ಹುಡುಕಿ ಹೊರ ತೆಗೆದಿದ್ದಾರೆ. ರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net