

ನವದೆಹಲಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ದೆಹಲಿಯ ನಜಾಫಗಢದ ರಸ್ತೆ ಕುಸಿದು ನಿರ್ಮಾಣವಾಗಿದ್ದ ಹಳ್ಳದಲ್ಲಿ ಟ್ರಕ್ ಉರುಳಿಬಿದ್ದಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿಯೇ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರಕ್ ಹಳ್ಳಕ್ಕೆ ಬಿದ್ದಿರುವ ಫೋಟೋವನ್ನು ಗುರುವಾರ ಬಿಡುಗಡೆ ಮಾಡಿದ್ದು, ಈಗಲೂ ಟ್ರಕ್ ಹಳ್ಳದಲ್ಲೇ ಇದೆ. ತೌಕ್ತೆ ಚಂಡಮಾರುತದ ಪರಿಣಾಮದಿಂದ ಗುರುವಾರ ರಾತ್ರಿ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ದೆಹಲಿಯ ಅನೇಕ ಏರಿಯಾಗಳು ಜಲಾವೃತಗೊಂಡಿದೆ.
ಮಳೆಯಿಂದ ನಜಾಫಗಢದ ರಸ್ತೆ ಕುಸಿದು ಹಳ್ಳ ನಿರ್ಮಾಣವಾಗಿದೆ. ಈ ಏರಿಯಾದಲ್ಲಿ ನಿರ್ಮಾಣ ಮಾಡುತ್ತಿದ್ದ ಮೆಟ್ರೋದಿಂದಾಗಿ ರಸ್ತೆ ಕುಸಿದಿದೆ ಎಂದು ಹೇಳಲಾಗಿದ್ದು, ದೆಹಲಿ ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ಜರುಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)