

ಹೈದರಾಬಾದ್: ಕೌಟುಂಬಿಕ ಕಲಹದಿಂದ ಬೇಸತ್ತು ವಕೀಲೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಚಾಂದನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಕೀಲೆಯನ್ನು ಶಿವಾನಿ ಎಂದು ಗುರುತಿಸಲಾಗಿದೆ. ಈಕೆ ಲಕ್ಷ್ಮೀ ವಿಹಾರದ 1ನೇ ಹಂತದಲ್ಲಿರುವ ಡಿಫೆನ್ಸ್ ಕಾಲನಿಯಲ್ಲಿ ವಾಸವಿದ್ದರು. ಶನಿವಾರ ರಾತ್ರಿ ಕಟ್ಟದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಾನಿ ಐದು ವರ್ಷಗಳ ಹಿಂದೆ ಅರ್ಜುನ್ ಎಂಬಾತನನ್ನು ಮದುವೆ ಆಗಿದ್ದರು. ದಂಪತಿ ಓರ್ವ ಮಗನಿದ್ದಾನೆ.
ಇತ್ತೀಚೆಗೆ ಕುಟುಂಬದಲ್ಲಿ ಪತಿ-ಪತ್ನಿ ನಡುವೆ ಹೆಚ್ಚಾಗಿ ಗಲಾಟೆ ನಡೆಯುತ್ತಿತ್ತು. ಇದರಿಂದ ತೀವ್ರವಾಗಿ ಮನನೊಂದಿದ್ದ ಶಿವಾನಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪತ್ನಿ ಸಾವಿನ ಸುದ್ದಿ ಕೇಳಿದ ಪತಿ ಅರ್ಜುನ್ ಚಾಂದನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್)