ಹೀಗೂ ಹಣ್ಣು ಮಾರಾಟ ಮಾಡಬಹುದಾ? ಈ ವಿಡಿಯೋ ನೋಡಿ ನಗದೇ ಇರಲು ಟ್ರೈ ಮಾಡಿ...

Fruit Seller
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿಚಿತ್ರವಾಗಿ ಮತ್ತು ತಮಾಷೆಯ ಸನ್ನೆಗಳನ್ನು ಮಾಡುತ್ತಾ ಹಣ್ಣು ಮಾರಾಟ ಮಾಡುವ ದೃಶ್ಯವಿದೆ. ಈ ವಿಡಿಯೋವನ್ನು ಯುಮ್​ ಯುಮ್​ ಇಂಡಿಯಾ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಜೂನ್​ 20ರಂದು ಅಪ್​ಲೋಡ್​ ಮಾಡಲಾಗಿದೆ. ಈವರೆಗೂ 20 ಸಾವಿರಕ್ಕೂ ಹೆಚ್ಚುಮ ವೀಕ್ಷಣೆಗಳನ್ನು ಪಡೆದುಕೊಂಡಿದೆ. 80ಕ್ಕೂ ಹೆಚ್ಚು ಮಂದಿ ವಿಡಿಯೋಗೆ ಕಾಮೆಂಟ್​ ಮಾಡಿದ್ದಾರೆ.

ವಿಡಿಯೋಗೆ ಭಾರತದ ಅತ್ಯುತ್ಸಾಹಿ ಹಣ್ಣು ಮಾರಾಟಗಾರ ಎಂದು ಶೀರ್ಷಿಕೆ ನೀಡಲಾಗಿದೆ. ಮಾರಾಟಗಾರನು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೂಗುತ್ತಾ ಮತ್ತು ತಮಾಷೆಯ ಮುಖ ಭಾವಗಳನ್ನು ಮಾಡುವ ಮೂಲಕ ಹಣ್ಣುಗಳನ್ನು ಮಾರಾಟ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಯೂಟ್ಯೂಬ್​ ಮಾತ್ರವಲ್ಲದೆ, ಟ್ವಿಟರ್​, ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ನಂತಹ ಇತರೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲೂ ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅದರ ವಿಡಿಯೋ ಲಿಂಕ್​ ಈ ಕೆಳಗಡೆ ಇದೆ. ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮಾಡಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net