More

    ವಾರದಲ್ಲಿ 2 ದಿನ ಕೆಲ್ಸ…ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ

    ಹೈದರಾಬಾದ್​: ಈ ಮೇಲಿನ ಫೋಟೋದಲ್ಲಿ ಮುಖ ಮರೆಮಾಚಿರುವ ಮಹಿಳೆಯು ಕಳೆದ ಆರು ತಿಂಗಳಲ್ಲಿ 27 ಲಕ್ಷ ರೂಪಾಯಿ ಹಣ ಗಳಿಸಿದ್ದಾಳೆ ಅಂದ್ರೆ ನೀವು ನಂಬಲೇಬೇಕು. ಆದರೆ, ಆಕೆ ಹಣ ಸಂಪಾದಿಸಿದ ರೀತಿ ಮಾತ್ರ ಎಲ್ಲರ ಹುಬ್ಬೇರಿಸದೇ ಇರದು. ಇಡೀ ವಾರಪೂರ್ತಿ ಕೆಲಸ ಮಾಡಿ ಕೇವಲ ಒಂದು ದಿನ ವಿರಾಮ ಪಡೆಯುವ ಮಂದಿಯ ನಡುವೆ ಈಕೆ ವಾರದಲ್ಲಿ ಎರಡು ದಿನ ಮಾತ್ರ ಕೆಲಸ ಮಾಡಿ ಇಷ್ಟೊಂದು ಹಣ ಗಳಿಸಿದ್ದಾಳೆ ಅಂದ್ರೆ ಅಚ್ಚರಿಯಾಗದೇ ಇರುತ್ತಾ? ಈಕೆ ಸಾಮಾನ್ಯದವಳಲ್ಲ ಎಂದು ಒಂದು ಕ್ಷಣ ಗೊಣಗಿಕೊಳ್ಳುವುದು ಕೂಡ ಸಹಜ.

    ಹೌದು, ಈಕೆ ಸಾಮಾನ್ಯದವಳಲ್ಲ. ಏಕೆಂದರೆ, ಈಕೆ ಖತರ್ನಾಕ್​ ಕಳ್ಳಿ. ಬಸ್ಸುಗಳೇ ಈಕೆಯ ಟಾರ್ಗೆಟ್​. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ಸುಗಳನ್ನು ಏರುತ್ತಿದ್ದ ಈಕೆ ಬರಿಗೈಯಲ್ಲಿ ವಾಪಸ್​ ಬಸ್ಸಿನಿಂದ ಇಳಿಯುತ್ತಿದ್ದಳು. ಆದರೆ, ಆಕೆಯ ಪಾಕೆಟ್​ನಲ್ಲಿ ಮಾತ್ರ ಮಹಿಳೆಯರ ಚಿನ್ನದ ಒಡವೆಗಳೇ ತುಂಬಿರುತ್ತಿದ್ದವು. ಇದೇ ರೀತಿ ಕಳ್ಳತನ ಮಾಡಿ ಕೇವಲ ಆರೇ ತಿಂಗಳಲ್ಲಿ ಈಕೆ 27 ಲಕ್ಷ ರೂಪಾಯಿ ಬೆಲೆ ಬಾಳುವ ಒಡವೆಗಳನ್ನು ಕದ್ದಿದ್ದಾಳೆ.

    ಖತರ್ನಾಕ್​ ಕಳ್ಳಿಯನ್ನು ಬಂಧಿಸಲಾಗಿದೆ. ಈಕೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯವಳು. ಆರ್ಮೂರ್ ಪಟ್ಟಣದ ಪೊಲೀಸರು ಕಿಲಾಡಿ ಲೇಡಿಯನ್ನು ಬಂಧಿಸಿದ್ದಾರೆ. ಆರೋಪಿಯ ಹೆಸರು ಯಾದಲಕ್ಷ್ಮಿ. ಈಕೆಯ ಬಳಿ 27.50 ಲಕ್ಷ ರೂಪಾಯಿ ಬೆಲೆ ಬಾಳುವ 55 ತೊಲ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ. ಬಸ್ಸುಗಳಲ್ಲಿ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡುವ ಈ ಖತರ್ನಾಕ್​ ಕಳ್ಳಿ ತನ್ನ ದುಷ್ಕೃತ್ಯದಿಂದ ಅನೇಕ ಮಂದಿಗೆ ನಿದ್ರೆ ಇಲ್ಲದ ರಾತ್ರಿ ಕಳೆಯುವಂತೆ ಮಾಡಿದ್ದಾಳೆ.

    ವಾರದಲ್ಲಿ 2 ದಿನ ಕೆಲ್ಸ...ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ

    ನಿಜಾಮಾಬಾದ್​ನಿಂದ ನಿರ್ಮಲ್​​ ಕಡೆಗೆ ತೆರಳುವ ಬಸ್ಸುಗಳನ್ನೇ ಈಕೆ ಟಾರ್ಗೆಟ್​ ಮಾಡುತ್ತಿದ್ದಳು. ಬಸ್​ನಲ್ಲಿ ತುಂಬಾ ಪ್ರಯಾಣಿಕರು ಇದ್ದಂತಹ ಸಮಯದಲ್ಲಿ ಈಕೆ ಲಗೇಜ್​ ಬ್ಯಾಗ್​ ಮತ್ತು ಹ್ಯಾಂಡ್​ಬ್ಯಾಗ್​ಗಳನ್ನು ಎಗರಿಸುತ್ತಿದ್ದಳು. ಶನಿವಾರ ಮತ್ತು ಭಾನುವಾರ ಹೆಚ್ಚು ಪ್ರಯಾಣಿಕರು ಓಡಾಡುತ್ತಿದ್ದರಿಂದ ಆ ದಿನಗಳಲ್ಲಿ ಮಾತ್ರ ತನ್ನ ಕೈಚಳಕ ತೋರುತ್ತಿದ್ದಳು. ಅದರಲ್ಲೂ ಮಕ್ಕಳ ಜೊತೆ ಪ್ರಯಾಣಿಸುವ ಪ್ರಯಾಣಿಕರೇ ಈಕೆ ಪ್ರಮುಖ ಟಾರ್ಗೆಟ್​ ಆಗಿದ್ದರು. ಪ್ರಯಾಣಿಕರು ಮಾತಿಗೆಳೆದು ಮರಳು ಮಾಡಿ ಚಿನ್ನಾಭರಣ ಕದಿಯುತ್ತಿದ್ದಳು.

    ಕಳೆದ ಆರು ತಿಂಗಳು ಯಾರ ಕೈಗೂ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದ ಖತರ್ನಾಕ್​ ಲೇಡಿ ಇದೀಗ ಆರ್ಮೂರ್​ ಪಟ್ಟಣದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆ ಅಡಿಯಲ್ಲಿ ಕಿಲಾಡಿ ಲೇಡಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಕೆಯ ವಿರುದ್ಧ ಒಟ್ಟು 14 ಪ್ರಕರಣಗಳನ್ನು ದಾಖಲಿಸಲಾಗಿದೆ. ಕದ್ದ ಚಿನ್ನಾಭರಣಗಳನ್ನು ತಕ್ಷಣವೇ ಮಾರಾಟ ಮಾಡುವ ಬದಲು ಅನೇಕ ಹಣಕಾಸು ಕಂಪನಿಗಳಲ್ಲಿ ಹಣವನ್ನು ಗಿರವಿ ಇಡುತ್ತಿದ್ದಳು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಜನ ಸಾಮಾನ್ಯರಿಗೆ ಮತ್ತೆ ದರ ಏರಿಕೆ ಬರೆ​: ಗೃಹಬಳಕೆಯ LPG ಸಿಲಿಂಡರ್​ ಬೆಲೆಯಲ್ಲಿ 50 ರೂ. ಹೆಚ್ಚಳ

    ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಅನ್ನೋದು ಸುಳ್ಳು: ಸ್ಫೋಟಕ ಸಂಗತಿ ಬಿಚ್ಚಿಟ್ಟ ಆರೋಪಿ ಮಹಾಂತೇಶ್​ ಪತ್ನಿ

    ಬ್ರಿಟನ್​ ಪ್ರಧಾನಿಗೆ ಬಿಗ್​​ ಶಾಕ್​: ಸಚಿವ ಸ್ಥಾನಕ್ಕೆ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts