ಕಾಡನೆ ಹಿಂಡಿನ ಜತೆಯಲ್ಲಿ ಯುವಕರ ಪುಂಡಾಟ: ಮೇಲೆರಗಲು ಯತ್ನಿಸಿದ ಸಲಗ

Elephant
Published on

ಕೆಲಮಂಗಲ: ಕಾಡನೆ ಹಿಂಡಿನ ಜತೆಯಲ್ಲಿ ಕೆಲ ಯುವಕರು ಪುಂಡಾಟ ಮೆರೆದಿರುವ ಘಟನೆ ತಮಿಳುನಾಡಿನ ಕೆಲಮಂಗಲಂ ಪಟ್ಟಣದ ನಾಗಮಗಲಂ ಗ್ರಾಮದಲ್ಲಿ ನಡೆದಿದೆ.

ಉಡೇ ದುರ್ಗಂ ಕಾಡಂಚಿನಲ್ಲಿ ಆನೆಗಳು ಬೀಡುಬಿಟ್ಟಿವೆ. ಕೆಲ ಯುವಕರು ಕಲ್ಲುಬಂಡೆಗಳ ಮೇಲೆ ನಿಂತು ಕಾಡಾನೆಗಳಿಗೆ ಕೀಟಲೆ ಮಾಡಿದ್ದು, ರೊಚ್ಚಿಗೆದ್ದ ಸಲಗವೊಂದು ಯುವಕರ ಮೇಲೆರಗುವ ಪ್ರಯತ್ನ ಮಾಡಿದೆ. ಆದರೆ, ಎತ್ತರದ ಬಂಡೆಯಾಗಿರುವುದರಿಂದ ಯುವಕರು ಬಚಾವ್​ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವಕರ ಪುಂಡಾಟದ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ.

ಸದ್ಯ ಐವತ್ತಕ್ಕೂ ಹೆಚ್ಚು ಕಾಡಾನೆಗಳು ಕಾಡಂಚಿನಲ್ಲಿ ಬೀಡುಬಿಟ್ಟಿವೆ. ಕಳೆದ ಒಂದು ವಾರದಿಂದ ನಿರಂತರವಾಗಿ ತಮಿಳುನಾಡು ಹಾಗೂ ಕರ್ನಾಟಕದ ಗಡಿಭಾಗದಲ್ಲಿ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತಿರುವುದು ಗಡಿಭಾಗದ ಗ್ರಾಮದ ಜನರನ್ನು ಆತಂಕಕ್ಕೆ ದೂಡಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net