More

    ಸಾಯಿತೇಜ್​ ನಗರ! ಹುಟ್ಟೂರಿಗೆ ಹುತಾತ್ಮ ಯೋಧ ಸಾಯಿತೇಜ್​ ಹೆಸರಿಡಲು ಸ್ಥಳೀಯಾಡಳಿತ ನಿರ್ಧಾರ

    ವಿಜಯವಾಡ: ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್​ ನಾಯ್ಕ​ ಸಾಯಿತೇಜ್ ಕೂಡ ಒಬ್ಬರು. ಇವರ ನಿಧನ ಭಾರತೀಯ ಸೇನೆಗೆ ತುಂಬಲಾರದ ನಷ್ಟವಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಿಪಿನ್​ ರಾವತ್​​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದ ಸಾಯಿತೇಜ್​ ಅವರ ಸಾಧನೆ ಇತಿಹಾಸದ ಪುಟಗಳಲ್ಲಿ ಸೇರಿದ್ದು, ಅವರ ಹೆಸರನ್ನು ಅಜರಾಮರಗೊಳಿಸಲು ಇದೀಗ ಸ್ಥಳೀಯ ಆಡಳಿತ ನಿರ್ಧಾರವೊಂದನ್ನು ಮಾಡಿದೆ.

    ಸಾಯಿತೇಜ್​ ಅವರ ತವರು ಗ್ರಾಮಕ್ಕೆ ಅವರ ಹೆಸರನ್ನಿಡಲು ಸ್ಥಳೀಯ ನಾಯಕರು ಮತ್ತು ಅಧಿಕಾರಿಗಳು ಪ್ರಸ್ತಾಪ ಮಾಡಿದ್ದಾರೆ. ಸಮಗ್ರ ಅಧಿವೇಶನದ ಮುಂದೆ ಸ್ಥಳೀಯ ನಾಯಕರು ಪ್ರಸ್ತಾಪ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಒ) ದಿಲೀಪ್​ ಕುಮಾರ್​ ನಾಯಕ್​, ಚಿತ್ತೂರು ಜಿಲ್ಲೆಯ ಕುರಬಲಕೋಟ ಮಂಡಲದ ಎರ್ರಬಲ್ಲಿ ಪಂಚಾಯಿತಿಯ ಎಗುವರೆಗಡ ಹೆಸರನ್ನು ಸಾಯಿತೇಜ್​ ನಗರವನ್ನಾಗಿ ಬದಲಾಯಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಮಂಗಳವಾರ ಕಳುಹಿಸಲಾಗಿದೆ. ಹಲವು ಸ್ಥಳೀಯ ನಾಯಕರು ಕೂಡ ಇದಕ್ಕೆ ಸಮ್ಮತಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.

    ಡಿಗ್ರಿ ಮುಗಿಸಿದ ಬೆನ್ನಲ್ಲೇ 2012ರಲ್ಲಿ ಗುಂಟೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಭಾಗವಹಿಸಿದ್ದ ಸಾಯಿತೇಜ್​ ಆಯ್ಕೆಯಾದರು. ಇದಾದ ಬಳಿಕ ಪ್ಯಾರಾ ಕಮ್ಯಾಂಡೋ ಪರೀಕ್ಷೆಯನ್ನು ಸಹ ಪಾಸ್​ ಮಾಡಿದ ಅವರು 11ನೇ ಪ್ಯಾರಾ ಲ್ಯಾನ್ಸ್​ ನಾಯಕರಾದರು. ಸೇನಾ ಮುಖ್ಯಸ್ಥರ ಸಿಬ್ಬಂದಿ ರಚನೆಯಾದಾಗ ಬಿಪಿನ್​ ರಾವತ್​ ಅವರ ವೈಯಕ್ತಿಕ ರಕ್ಷಣಾಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ.

    ಡಿ. 8ರಂದು ಬಿಪಿನ್​ ರಾವತ್​ ಜತೆ ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ

    ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ… ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ

    ಮಾಡೆಲ್​ಗಳಿಬ್ಬರ ದುರಂತ ಸಾವು: ಸ್ಫೋಟಕ ಆರೋಪ ಮಾಡಿದ ಸಂಸದ ಸುರೇಶ್​ ಗೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts