ಅಜ್ಜನಿಂದ ಅಮ್ಮನಿಗೆ ಬಂದಿರುವ ಆಸ್ತಿಯಲ್ಲಿ ನಾವು ಪಾಲು ಕೇಳಬಹುದೆ? ಕೇಸ್‌ ಹಾಕಬೇಕಾ?

nyayadevate
Published on
ನಮ್ಮ ತಾತ, ಅಜ್ಜಿಗೆ 5 ಜನ ಹೆಣ್ಣುಮಕ್ಕಳು ಹಾಗೂ ನಮ್ಮ ತಾತನಿಗೆ ಆಸ್ತಿಯು ಪಿತ್ರಾರ್ಜಿತವಾಗಿ ಬಂದಂತಹದ್ದು. 5 ಜನ ಹೆಣ್ಣುಮಕ್ಕಳಲ್ಲಿ 4ನೇ ಮಗಳು ನಮ್ಮ ತಾಯಿ. ಅವರು ತೀರಿ ಹೋಗಿದ್ದಾರೆ. ನಾನು ಮತ್ತು ನಮ್ಮ ತಂಗಿ ಇಬ್ಬರು ಇದ್ದೇವೆ. ನಮ್ಮ ತಾತನ ಆಸ್ತಿಯಲ್ಲಿ ಪಾಲು ಕೇಳಬಹುದೇ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ನ್ಯಾಯ ಸಿಗುತ್ತದೆಯೇ ದಯವಿಟ್ಟು ತಿಳಿಸಿ.

ಉತ್ತರ: ನಿಮ್ಮ ತಾತನ ಆಸ್ತಿಯಲ್ಲಿ ಅವರ ಎಲ್ಲ ಮಕ್ಕಳಿಗೂ ಸಮಭಾಗ ಇರುತ್ತದೆ. ನಿಮ್ಮ ಮೃತ ತಾಯಿಯ ಭಾಗ , ನಿಮ್ಮ ತಾಯಿಯ ಪತಿ ಅಂದರೆ (ನಿಮ್ಮ ತಂದೆಗೆ), ಮತ್ತು ನಿಮ್ಮ ತಾಯಿಯ ಮಕ್ಕಳಿಗೆ, ಅಂದರೆ ನಿಮಗೂ ನಿಮ್ಮ ತಂಗಿಗೂ ಸಮಭಾಗವಾಗಿ ಸಿಗುತ್ತದೆ.

ಧೈರ್ಯವಾಗಿ ವಿಭಾಗದ ಕೇಸು ಹಾಕಿ. ನಿಮ್ಮ ಅಜ್ಜಿ ಬದುಕಿದ್ದರೆ ಅವರಿಗೂ ಅಜ್ಜನ ಆಸ್ತಿಯಲ್ಲಿ ಭಾಗ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net