More

    90ನೇ ವಯಸ್ಸಿಗೆ 5ನೇ ಮದುವೆಯಾದ ಅಜ್ಜ, ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ ಮೊಮ್ಮಗ

    ಸೌದಿ ಅರೇಬಿಯಾ: ವೃದ್ಧನೊಬ್ಬ ತನ್ನ 90ನೇ ವಯಸ್ಸಿನಲ್ಲಿ ಐದನೇ ಬಾರಿಗೆ ವಿವಾಹವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವ ಘಟನೆ ಸೌದಿ ಅರೇಬಿಯಾದ ಅಫೀಫ್ ಪ್ರಾಂತ್ಯದಲ್ಲಿ ನಡೆದಿದೆ.

    ನಾಸರ್ ಬಿನ್ ದಹೈಮ್ ಎಂಬಾತನೇ ಇಳಿವಯಸ್ಸಿನಲ್ಲಿಯೂ ವಿವಾಹವಾಗುವ ಮೂಲಕ ದೇಶದ ಹಿರಿಯ ವರ ಎನಿಸಿಕೊಂಡಿದ್ದಾನೆ. ಈ ವರನಿಗೆ ಆತನ ಮೊಮ್ಮಗನು ಕೂಡ ಶುಭ ಹಾರೈಸಿದ್ದು, ಈ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

    ಇದನ್ನೂ ಓದಿ: ತಾಂತ್ರಿಕನ ಮಾತು ಕೇಳಿ ಬಾಲಕಿಯ ಹೃದಯವನ್ನೇ ಚಾಕುವಿನಿಂದ ಬಗೆದ ಮಹಿಳೆ

    ಈ ಕುರಿತು ಉತ್ಸಾಹಭರಿತದಿಂದ ಮಾತನಾಡಿರುವ ನಾಸರ್​​, ತಾನು ಮತ್ತೆ ಮದುವೆಯಾಗಲು ಬಯಸುತ್ತೇನೆ. ವೈವಾಹಿಕ ಜೀವನವು ನಂಬಿಕೆಯ ಸರ್ವಶಕ್ತ ಕಾರ್ಯವಾಗಿದೆ. ಲೋಕಗಳ ಪ್ರಭುವಿನ ಮುಂದೆ ಹೆಮ್ಮೆಯ ಮೂಲವಾಗಿದ್ದು, ಇದು ಸಾಂತ್ವನ, ಪ್ರಾಪಂಚಿಕ ಸಮೃದ್ಧಿಯನ್ನು ತರುತ್ತದೆ. ಅಲ್ಲದೇ, ನನ್ನ ಉತ್ತಮ ಆರೋಗ್ಯದ ರಹಸ್ಯವು ಕೂಡ ಇದರಲ್ಲೇ ಅಡಗಿದ್ದು, ವಿವಾಹವನ್ನು ಸ್ವೀಕರಿಸಲು ಹಿಂದೇಟು ಹಾಕುವ ಯುವಜನರು ಸಾರ್ಥಕ ಜೀವನಕ್ಕಾಗಿ ವಿವಾಹ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾನೆ.

    ಅಲ್ಲದೇ, ಮದುವೆಯು ದೈಹಿಕ ಸೌಕರ್ಯ ಮತ್ತು ಸಂತೋಷದ ಮೂಲವಾಗಿದ್ದು ವೃದ್ಧಾಪ್ಯವು ವಿವಾಹವಾಗುವುದನ್ನು ತಡೆಯುವುದಿಲ್ಲ. ನನ್ನ ಮಕ್ಕಳಿಗೆ ಈಗ ಮಕ್ಕಳಿದ್ದು, ನಾನು ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ಆತ ತಿಳಿಸಿದ್ದಾನೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts