

ಮುಂಬೈ: ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಮ್ಯಾನೇಜರ್ ಮೇಲೆ ಕೋಪಗೊಂಡು ಚಪ್ಪಲಿ ಸೇವೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮ್ಯಾನೇಜರ್ಗೆ ಚಪ್ಪಲಿಯಲ್ಲಿ ಹೊಡೆಯುವ ವಿಡಿಯೋವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ನನ್ನ ಸೇಡು ತೀರಿಸಿಕೊಂಡೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದೆ.
ವಿಡಿಯೋದಲ್ಲಿ ಏನಿದೆ? ಸನ್ನಿ ಸ್ವಿಮ್ಮಿಂಗ್ ಪೂಲ್ನ ಅಂಚಿನಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಅವರ ಹಿಂದೆ ಅಂಗರಕ್ಷಕರ ಕೊಡೆ ಹಿಡಿದು ಬರುತ್ತಿರುತ್ತಾರೆ. ಈ ವೇಳೆ ದಿಢೀರನೇ ಎಂಟ್ರಿ ಕೊಡುವ ಮ್ಯಾನೇಜರ್, ಸನ್ನಿ ಅವರನ್ನು ಸ್ವಿಮ್ಮಿಂಗ್ ಪೂಲ್ ಒಳಗೆ ನೂಕುತ್ತಾರೆ. ನೀರಿನ ಒಳಗೆ ಬೀಳುವ ಸನ್ನಿ ಕೋಪಗೊಂಡು ತಮ್ಮ ಚಪ್ಪಲಿಗಳನ್ನು ತೆಗೆದುಕೊಂಡು ಮ್ಯಾನೇಜರ್ಗೆ ಬಾರಿಸುತ್ತಾರೆ. ಈ ವೇಳೆ ಅಲ್ಲಿದ್ದವರು ಸನ್ನಿ ನೋಡಿ ನಗುತ್ತಿರುತ್ತಾರೆ.
ಸನ್ನಿ ಮಾಡಿರುವ ಪೋಸ್ಟ್ನ ಕೆಳಗೆ ಹಲವಾರು ಅಭಿಮಾನಿಗಳು ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ನಟಿಯ ಸೇಡು ತೀರಾ ಕಡಿಮೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸನ್ನಿ ಲಿಯೋನ್ ತನ್ನ ಉದ್ಯೋಗಿಗಳ ಬಗ್ಗೆ ತುಂಬಾ ಪ್ರೀತಿಯಿಂದ ಇರುತ್ತಾಳೆ ಎಂಬುದನ್ನು ಈ ವೀಡಿಯೊ ಸಾಬೀತುಪಡಿಸುತ್ತದೆ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)