ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

Sarayu
Published on

ಹೈದರಾಬಾದ್​: ಟಾಲಿವುಡ್​ ಬ್ಯೂಟಿ ಸರಯೂ ರಾಯ್​ ತಮ್ಮ ಬೋಲ್ಡ್​ ಮಾತಿಗಳಿಂದಲೇ ಸುದ್ದಿಯಾದವರು. ತಾವಾಡುವ ಮಾತುಗಳಲ್ಲಿ ಯಾವುದೇ ಫಿಲ್ಟರ್​ ಇಲ್ಲದೆ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಗುಣ ಸರಯೂ ಅವರದ್ದು. ಇತ್ತೀಚೆಗೆ ತೆಲುಗು ಬಿಗ್​ಬಾಸ್​ ಸೀಸನ್​ 5ಕ್ಕೆ ಎಂಟ್ರಿ ಕೊಟ್ಟಿದ್ದ ಸರಯೂ ಮೊದಲ ವಾರದಲ್ಲೇ ಮನೆಯಿಂದ ಎಲಿಮಿನೇಶನ್​ ಆಗಿದ್ದಾರೆ.

ಮನೆಯಿಂದ ಹೊರಬರುತ್ತಿದ್ದಂತೆ ಸರಯೂ ಮಾಧ್ಯಮ ಸಂದರ್ಶನಗಳಲ್ಲಿ ಬಿಜಿಯಾಗಿದ್ದಾರೆ. ಕೆಲ ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೋಲ್ಡ್​ ಆಗಿ ಮಾತನಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಏಳು ವರ್ಷ ಒಬ್ಬನ ಜತೆ ರಿಲೇಷನ್​ಶಿಪ್​ನಲ್ಲಿದ್ದ ಸರಯೂ, ಆತನಿಗಾಗಿ ತನ್ನ ವೃತ್ತಿ ಜೀವನವನ್ನು ಶೇ. 100 ರಷ್ಟು ಬದಿಗಿಟ್ಟಿದೆ ಎಂದಿದ್ದಾರೆ. ಅಲ್ಲದೆ, ನಾನು ಆತನ ಜತೆ ಕನ್ಯತ್ವವನ್ನು ಕಳೆದುಕೊಂಡಿದ್ದೇನೆಂದು ಬೋಲ್ಡ್​ ಆಗಿ ಮಾತನಾಡಿದ್ದಾರೆ.

ನಾವಿಬ್ಬರು ಒಂದೇ ಮನೆಯಲ್ಲಿ ವಾಸವಿದ್ದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಮದುವೆ ಬಗ್ಗೆ ಪ್ರಸ್ತಾಪವೂ ನಡೆದಿತ್ತು. ಈ ಬಗ್ಗೆ ಪ್ರಿಯಕರ ಮನೆಯವರ ಬಳಿ ಮಾತನಾಡಿದಾಗ ಅವರು 25 ಲಕ್ಷ ರೂ. ವರದಕ್ಷಿಣೆ ಕೇಳಿದರು. ಬಳಿಕ 50 ಲಕ್ಷ ರೂ.ಗೆ ಬೇಡಿಕೆ ಇಟ್ಟರು. ಇನ್ನು ಸ್ವಲ್ಪ ದಿನಗಳು ಕಳೆದ ನಂತರ ಅರ್ಧ ಆಸ್ತಿಯನ್ನೇ ಕೇಳಿದರು.

ಮದುವೆಗೂ ಮುನ್ನವೇ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿದ ಸರಯು, ಮದುವೆ ನಂತರ ತನ್ನ ಪರಿಸ್ಥಿತಿ ಏನಾಗಬಹುದು ಎಂದು ಮೊದಲೇ ಯೋಚಿಸಿ ಮದುವೆಗೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಆತನ ಜತೆ ಸಂಬಂಧವೊಂದೇ ಮುಖ್ಯ ಅಲ್ಲ, ನಾನು ತಪ್ಪು ಮಾಡಿದರೂ, ನಾನು ಒಪ್ಪಿಕೊಂಡರೂ, ಪಾಲಕರಿಗೆ ಹೇಳದೆ ನಾನು ಏನನ್ನೂ ಮಾಡುವುದಿಲ್ಲ. ಮೊದಲು ನನ್ನ ಕುಟುಂಬದೊಂದಿಗೆ ಮುಕ್ತವಾಗಿರಲು ಇಷ್ಟಪಡುತ್ತೇನೆ ಎಂದು ಸರಯೂ ಹೇಳಿದ್ದಾರೆ. ಅವರ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net