ನಟಿ ಕೃಷಿ ತಾಪಂಡ ಕನಸು-ನನಸು; ಬೀರು ಬ್ರ್ಯಾಂಡ್ ನೇಮ್

Tapanda
Published on

ಬೆಂಗಳೂರು: ‘ಲಾಕ್​ಡೌನ್ ಶುರುವಾಗಿದೆ. ಅನಿಶ್ಚಿತತೆ ಕಾಡುತ್ತಿದೆ. ಸಿನಿಮಾ ಬಿಟ್ಟರೆ ಮುಂದೇನು? ಅದಕ್ಕಾಗಿಯೇ ಹೊಸ ಉದ್ಯಮದ ಪ್ಲಾನ್ ಹಾಕಿದ್ದೇನೆ’- ಹೀಗೆ ಮೊದಲ ಕರೊನಾ ಅಲೆಯ ವೇಳೆ ಹೇಳಿಕೊಂಡಿದ್ದರು ನಟಿ ಕೃಷಿ ತಾಪಂಡ. ಇದೀಗ ಹೇಳಿದಂತೆ ಹೊಸ ಉದ್ಯಮ ಶುರು ಮಾಡಿದ್ದಾರೆ. ಅದರ ಹೆಸರು ‘ಬೀರು’!

ಹೌದು, ಬಟ್ಟೆ ಉದ್ಯಮಕ್ಕೆ ಇಳಿದಿರುವ ಕೃಷಿ ಅಚ್ಚ ಕನ್ನಡದ ‘ಬೀರು’ (ವಾರ್ಡ್​ರೂಬ್) ಪದವನ್ನೇ ಬ್ರ್ಯಾಂಡ್​ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅದರ ಲೋಗೋ ಅನಾವರಣ ಮಾಡಿರುವ ಅವರು, ನವರಾತ್ರಿ ಹಬ್ಬದ ಪ್ರಯುಕ್ತ ಉತ್ಪನ್ನಗಳನ್ನು ಲಾಂಚ್ ಮಾಡಲಿದ್ದಾರೆ. ‘ಸಿನಿಮಾ ಬಿಟ್ಟರೆ ಮುಂದೇನು ಎಂದು ಕಾಣದಿದ್ದಾಗ ಹೊಳೆದಿದ್ದೇ ಈ ‘ಬೀರು’. ನಾನು ಮೊದಲಿಂದಲೂ ಫ್ಯಾಷನ್​ನಲ್ಲಿ ಆಸಕ್ತಿ. ನಾ ತೊಡುವ ಬಟ್ಟೆಗಳ ಬಗ್ಗೆ ಸಾಕಷ್ಟು ಜನ ಕೇಳಿದ್ದುಂಟು. ಅದನ್ನೇ ಗಮನದಲ್ಲಿಟ್ಟುಕೊಂಡು ‘ಬೀರು’ ಶುರುವಾಗಿದೆ. ಫ್ಯಾಷನ್ ಡಿಸೈನರ್ ಆಗಿರುವ ನಿಖಿತಾ ಭರಣ ನನ್ನ ಜತೆ ಸೇರಿದ್ದಾರೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಪ್ರಾಡಕ್ಟ್ ಕೊಡಬೇಕೆಂದುಕೊಂಡಿದ್ದೇವೆ. ಸದ್ಯ ನಾವು ಕೇವಲ 12 ಜನರಿದ್ದೇವೆ. ನವರಾತ್ರಿ ಪ್ರಯುಕ್ತ ಬ್ರಾಂಡ್ ಲಾಂಚ್ ಆಗಲಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net