ಈತ ಇನ್ನು ಬೆಂಗಳೂರಲ್ಲಿ ಕಾಣಿಸಿಕೊಳ್ಳುವಂತಿಲ್ಲ; 10 ವರ್ಷಗಳಿಂದ ಅಬ್ಬರಿಸಿದವ ಇನ್ನೊಂದು ವರ್ಷ ರಾಜಧಾನಿಯಲ್ಲಿ ಇರುವಂತಿಲ್ಲ..

Exile
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಅಬ್ಬರಿಸಿದ ಈತ ಇನ್ನೊಂದು ವರ್ಷ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಬೆಂಗಳೂರಿನ ಜೀವನ್​ಬಿಮಾನಗರದ ಜೋಶ್ವಾ ಅಲಿಯಾಸ್ ಜಾನ್​ಗೆ ಈ ಪರಿಸ್ಥಿತಿ ಬಂದಿದೆ.

ಜೀವನ್​ಬಿಮಾನಗರ ಪೊಲೀಸ್​ ಠಾಣೆಯ ರೌಡಿಶೀಟರ್ ಆಗಿರುವ ಜೋಶ್ವಾ ಅಲಿಯಾಸ್​ ಜಾನ್​ಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಒಂದು ವರ್ಷದ ಮಟ್ಟಿಗೆ ಈತನಿಗೆ ಗಡಿಪಾರು ಮಾಡಲಾಗಿದ್ದು, ಈ ಅವಧಿಯಲ್ಲಿ ಜಾನ್​ ಬೆಂಗಳೂರಿನಲ್ಲಿ ಇರುವಂತಿಲ್ಲ.

ಈತ 9-10 ವರ್ಷಗಳಿಂದ ಕೊಲೆ, ಹಲ್ಲೆ, ಜೀವ ಬೆದರಿಕೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಸಾರ್ವಜನಿಕರ ನೆಮ್ಮದಿಗೆ ಕಂಟಕವಾಗಿ ಪರಿಣಮಿಸಿದ್ದರಿಂದ ಈ ಗಡಿಪಾರು ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net