

ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಕೌಟುಂಬಿಕ ಪಾತ್ರಗಳಿಗೂ ಸೈ ಹಾಗೂ ಮೈಮಾಟ ಪ್ರದರ್ಶಿಸುವ ಬೋಲ್ಡ್ ಪಾತ್ರಗಳಿಗೂ ಸೈ ಎನ್ನುವ ಆಶಿಕಾ, ಚಂದನವನದ ಬಹು ಬೇಡಿಕೆ ನಟಿಯಾಗಿದ್ದಾರೆ. ಆಶಿಕಾ ಅವರಿಗೆ ಓರ್ವ ಸಹೋದರಿಯ ಇದ್ದಾರೆ. ಅವರು ಕೂಡ ಸಿನಿಮಾದಲ್ಲಿ ನಟಿಸಿರುವುದು ಬಹುತೇಕ ಮಂದಿಗೆ ತಿಳಿದೇ ಇಲ್ಲ.
ಹೌದು, ಅನುಷಾ ರಂಗನಾಥ್ ಅವರು 'ಸೋಡಾ ಬುಡ್ಡಿ', 'ಲೈಫ್ 360' ಮತ್ತು 'ಅಂದವಾದ' ಹೆಸರಿನ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಯಾವುದೇ ಅವಕಾಶ ಇಲ್ಲದಿರುವುದರಿಂದ ಖಾಸಗಿ ಜೀವನವನ್ನು ಅನುಷಾ ಸಂಭ್ರಮಿಸುತ್ತಿದ್ದಾರೆ.
ಅನುಷಾ ಅವರು ಇತ್ತೀಚೆಗೆ ಥಾಯ್ಲೆಂಡ್ ಪ್ರವಾಸ ಮಾಡಿದ್ದರು. ಆಶಿಕಾ ಕೂಡ ಜೊತೆಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಆಶಿಕಾ, ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹರಿಬಿಟ್ಟಿದ್ದರು. ಇದೀಗ ಅನುಷಾ ಕೂಡ ಬೋಲ್ಡ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಟಾಪ್ ಜೊತೆಯಲ್ಲಿ ಜೀನ್ಸ್ ಶಾರ್ಟ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಫೋಟೋಗಳನ್ನು ಪೋಸ್ಟ್ ಮಾಡಿದ್ದು, 32 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳ ಹರಿದುಬಂದಿವೆ.
ಆಶಿಕಾ ಮತ್ತು ಅನುಷಾ ಅವರು ತಮ್ಮ ಸ್ನೇಹಬಳಗದ ಜೊತೆ ಇತ್ತೀಚೆಗೆ ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದಿದೆ. ಪ್ರವಾಸದ ಬಹುತೇಕ ಫೋಟೋಗಳನ್ನು ಇಬ್ಬರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫ್ರೆಂಡ್ಸ್ ಜೊತೆ ಇಬ್ಬರು ಪ್ರವಾಸವನ್ನು ಸಖತ್ ಎಂಜಾಯ್ ಮಾಡಿದ್ದಾರೆ.
ಈ ಹಿಂದೆ ಆಶಿಕಾ ಶೇರ್ ಮಾಡಿಕೊಂಡಿದ್ದ ಫೋಟೋಗಳಲ್ಲಿ ಕೆಂಪು ಬಣ್ಣದ ಬಿಕಿನಿ ಕಟ್ ಮತ್ತು ಜೀನ್ಸ್ ಶಾರ್ಟ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಟ್ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆಶಿಕಾ ಅವರ ಹಾಟ್ ಅವತಾರ ಪಡ್ಡೆ ಹುಡುಗರ ಮೈ ಬಿಸಿಯೇರಿಸಿತ್ತು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅನುಷಾ ಅವರು ಅವಕಾಶಗಳಿಲ್ಲದೆ, ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಆಶಿಕಾಗೆ ಸಾಲು ಸಾಲು ಸಿನಿಮಾ ಆಫರ್ಗಳು ಬರುತ್ತಿವೆ. ಪವನ್ ಒಡೆಯರ್ ನಿರ್ದೇಶನದ ಹಾಗೂ ನಟ ಇಶಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ರೇಮೋ ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ, ಹೆಸರಿಡಿದ ಸಿನಿಮಾಗಳಿಗೆ ಈಗಾಗಲೇ ಆಶಿಕಾ ಸಹಿ ಹಾಕಿದ್ದಾರೆ.