ಈ ಬಿಕಿನಿ ಅವತಾರ ನೋಡಿ ಸಮಂತಾ ಮತ್ತೆ ಟ್ರೋಲ್​ ಆಗುವುದು ಖಂಡಿತ ಅಂತಿದ್ದಾರೆ ಫ್ಯಾನ್ಸ್​..!

Samantha
Published on

ಹೈದರಾಬಾದ್​: ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ಅವರ ವೃತ್ತಿಬದುಕಿಗೆ ಹೊಸ ಕಳೆ ಬಂದಂತಿದೆ. ಏಕೆಂದರೆ, ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆಯುತ್ತಾ ಬೆಳ್ಳಿ ತೆರೆಯ ಮೇಲೆ ಹಾಗೂ ಜಾಹೀರಾತುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಮಿಂಚುತ್ತಿದ್ದಾರೆ. ಸಮಂತಾ ಮುಟ್ಟಿದೆಲ್ಲ ಚಿನ್ನ ಎಂಬಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಮಂತಾ ಆಗಾಗ ತಮ್ಮ ಹಾಟ್​ ಅವತಾರಗಳನ್ನು ಬಹಿರಂಗಪಡಿಸುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುತ್ತಾರೆ. ನೆಟ್ಟಿಗರ ಎಷ್ಟೇ ಟ್ರೋಲ್​ ಮಾಡಿದರೂ, ಅವರಿಗೆ ತಮ್ಮದೇ ರೀತಿಯಲ್ಲಿ ತಿರುಗೇಟು ನೀಡುವ ಸಮಂತಾ ಹಾಟ್​ ಫೋಟೋಗಳನ್ನು ಪೋಸ್ಟ್​ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಹೌದು, ಇದೀಗ ಸಮಂತಾ ಮತ್ತೊಮ್ಮೆ ಸಖತ್​ ಬೋಲ್ಡ್​ ಫೋಟೋವನ್ನು ಹರಿಬಿಟ್ಟಿದ್ದು, ಯುವಕರ ನಿದ್ದೆಗೆಡಿಸಿದ್ದಾರೆ.

ಇತ್ತೀಚೆಗೆ ಬ್ರ್ಯಾಂಡ್​ ಒಂದಕ್ಕೆ ನಡೆಸಿರುವ ಫೋಟೋಶೂಟ್​ನ ಒಂದು ಫೋಟೋವನ್ನು ಸಮಂತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಕಪ್ಪು ಬಣ್ಣದ ಬಿಕಿನಿ ಧರಿಸಿ ಸಮಂತಾ ಸಖತ್​ ಬೋಲ್ಡ್​ ಆಗಿರುವ ಪೋಸ್​​ ನೀಡಿದ್ದು, ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದಾರೆ. ಫೋಟೋಗೆ ಈಗಾಗಲೇ 19 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳು ಹರಿದುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಫೋಟೋದಿಂದ ಸಮಂತಾ ಮತ್ತೊಮ್ಮೆ ಟ್ರೋಲ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗೆ ಬಿಡುಗಡೆಯಾದ ತಮಿಳು ಭಾಷೆಯ ಚಿತ್ರ ಕಾತುವಾಕುಲ ರೆಂಡು ಕಾದಲ್ ದೊಡ್ಡ ಹಿಟ್ ಆಗಿದೆ. ನಿರ್ಮಾಪಕರ ಪ್ರಕಾರ ಈ ಸಿನಿಮಾ 65 ಕೋಟಿ ರೂ. ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕರಾಗಿ ನಟಿಸಿದ್ದಾರೆ. ನಯನತಾರಾ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ವಿಜಯ್ ದೇವರಕೊಂಡ ಜತೆ ಹೊಸ ಚಿತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಶಿವ ನಿರ್ಮಾಣ ಹಗೂ ನಿರ್ದೇಶನದ 'ಖುಶಿ' ಸಿನಿಮಾದಲ್ಲಿ ಸ್ಯಾಮ್​ ಮತ್ತು ವಿಜಯ್​ ತೆರೆ ಹಂಚಿಕೊಂಡಿದ್ದು, ಈ ಚಿತ್ರ ಡಿಸೆಂಬರ್ 23ರಂದು ಬಿಡುಗಡೆಯಾಗಲಿದೆ. ಉಳಿದಂತೆ ಯಶೋಧ ಮತ್ತು ಶಾಕುಂತಲಂ ಸಿನಿಮಾಗಳಲ್ಲಿಯೂ ಸಮಂತಾ ನಟಿಸಿದ್ದು, ಎರಡು ಚಿತ್ರಗಳು ಬಿಡುಗಡೆ ಸಿದ್ಧವಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net