More

    ರಕ್ಷಿತ್​ಗೆ ಕಾರ್, ಚಾರ್ಲಿಗೆ ಕ್ಯಾರವಾನ್!; 1500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ‘777 ಚಾರ್ಲಿ’

    ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರದ ರಿಲೀಸ್ ಹತ್ತಿರವಾದಂತೆ ಪ್ರಚಾರದ ಭರಾಟೆ ಜೋರಾಗಿದೆ. ದೇಶಾದ್ಯಂತ 20ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದು, ಈಗಾಗಲೇ ಲಖನೌ, ಅಮೃತ್​ಸರ್, ಹೈದರಾಬಾದ್, ಕೊಚ್ಚಿ, ಚೆನ್ನೈ ಸೇರಿದಂತೆ ಹಲವೆಡೆ ಚಿತ್ರದ ಪ್ರದರ್ಶನವಾಗಿದೆ, ಈ ಕುರಿತು ಮಾತನಾಡುವ ರಕ್ಷಿತ್ ಶೆಟ್ಟಿ, ‘ತೆರೆಗೆ ಬರುವ ಮುನ್ನವೇ ಪ್ರೀಮಿಯರ್ ಶೋಗಳನ್ನು ಮಾಡಿದರೆ, ಅದನ್ನು ನೋಡಿದ ಜನರಿಂದ ಪ್ರಚಾರ ಸಿಗುತ್ತದೆ ಎನ್ನುವ ಉದ್ದೇಶದಿಂದ ಸಿನಿಮಾ ಸ್ಕ್ರೀನಿಂಗ್ ಮಾಡಿದ್ದೇವೆ. ನಮ್ಮ ಕಂಟೆಂಟ್ ಮಾತಾಡಬೇಕು, ಕಂಟೆಂಟ್ ಚೆನ್ನಾಗಿದ್ದರೆ ಅದೇ ಪ್ರಚಾರ. ಇವತ್ತು ನಮ್ಮ ಕಂಟೆಂಟ್ ನೋಡಿ ಜನ ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ. ‘777 ಚಾರ್ಲಿ’ ಚಿತ್ರದಲ್ಲಿ ದೇವಿಕಾ ಆರಾಧ್ಯ ಎಂಬ ಅನಿಮಲ್ ವೆಲ್ಪೇರ್ ಆಫೀಸರ್ ಪಾತ್ರದಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಅವರಿಗೂ ಪ್ರೀಮಿಯರ್​ನಲ್ಲಿ ಸಿಕ್ಕ ಪ್ರತಿಕ್ರಿಯೆ ತುಂಬ ಖುಷಿ ನೀಡಿದೆಯಂತೆ. ಅದರಲ್ಲೂ, ‘ಮೇನಕಾ ಗಾಂಧಿಯವರಿಗೆ ದೆಹಲಿಯಲ್ಲಿ ಪ್ರೀಮಿಯರ್ ಮಾಡಿದ್ದೆವು. ಅವರೂ ಮೆಚ್ಚಿಕೊಂಡರು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸಂಗೀತಾ.

    ಇನ್ನು ಚಿತ್ರದ ವಿತರಕ ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್ ಮಾತನಾಡಿ, ‘ಒಂದು ಚಿತ್ರಕ್ಕೆ ಒಂದು ಪ್ರೀಮಿಯರ್ ಮಾಡಲು ಯೋಚನೆ ಮಾಡುತ್ತಾರೆ. ಆದರೆ, ನಾವು ಕರ್ನಾಟಕದಲ್ಲೇ 100 ಪ್ರೀಮಿಯರ್ ಶೋಗಳನ್ನು ಮಾಡುತ್ತಿದ್ದೇವೆ. ಇದೇ ಒಂದು ದಾಖಲೆ. ರಿಲೀಸ್​ಗೂ ಮುನ್ನ ಗುರುವಾರ ಬೆಂಗಳೂರಲ್ಲಿ 55 ಹಾಗೂ ಕರ್ನಾಟಕದ ಬೇರೆ ಕಡೆಗಳಲ್ಲಿ 45 ಪ್ರೀಮಿಯರ್ ಶೋಗಳು ಇರಲಿವೆ. ಈಗಾಗಲೇ ಶೇಕಡಾ 90ರಂದು ಹೌಸ್​ಫುಲ್ ಆಗಿವೆ. ಮಲ್ಟಿಪ್ಲೆಕ್ಸ್ ಮಾತ್ರವಲ್ಲ, ಥಿಯೇಟರ್​ಗಳಲ್ಲೂ ಪ್ರೀಮಿಯರ್ ಶೋಗಳನ್ನು ಮಾಡಲಿದ್ದೇವೆ’ ಎಂದು ಚಿತ್ರದ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲಿ 300, ಉತ್ತರ ಭಾರತದಲ್ಲಿ 350, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳಗಳಲ್ಲಿ ತಲಾ 100 ಸ್ಕ್ರೀನ್​ಗಳಲ್ಲಿ ಹಾಗೂ ಅಮೆರಿಕಾದಲ್ಲಿ 200 ಸೇರಿದಂತೆ ವಿದೇಶಗಳಲ್ಲಿ 500ರಿಂದ 700 ಸ್ಕ್ರೀನ್​ಗಳಲ್ಲಿ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು. ಹೀಗೆ ಒಟ್ಟು 1500ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಲಿದೆ. ಇನ್ನು, ಚಾರ್ಲಿ ಜತೆ ಚಿತ್ರೀಕರಣಕ್ಕೆ ಎಷ್ಟು ದೊಡ್ಡ ಸವಾಲಾಗಿತ್ತು ಎಂಬುದರ ಬಗ್ಗೆ ಮಾತನಾಡಿದ ನಿರ್ದೇಶಕ ಕಿರಣ್ ರಾಜ್, ‘ಇಲ್ಲಿಂದಲೇ ಚಾರ್ಲಿಗಾಗಿ ಒಂದು ವಿಶೇಷವಾದ ಎಸಿ ಕ್ಯಾರವಾನ್ ರೆಡಿ ಮಾಡಿಸಿ ಒಂದು ವಾರ ಮುನ್ನವೇ ಕಾಶ್ಮೀರಕ್ಕೆ ಕಳುಹಿಸಿದ್ದೆವು. ರಕ್ಷಿತ್ ಶೆಟ್ಟಿ ಅವರು ಕಾರ್​ನಲ್ಲಿ ರೆಸ್ಟ್ ಮಾಡುತ್ತಿದ್ದರೆ, ಚಾರ್ಲಿ ಕ್ಯಾರವಾನ್​ನಲ್ಲಿ ರೆಸ್ಟ್ ಮಾಡುತ್ತಿದ್ದಳು. ಬೇರೆ ಬೇರೆ ಪರಿಸರದಲ್ಲಿ ಚಿತ್ರೀಕರಣ ಮಾಡಿರುವ ಕಾರಣ, ಹೋದ ಕಡೆಯಲ್ಲೆಲ್ಲಾ ಒಬ್ಬ ಸ್ಥಳೀಯ ಪಶು ವೈದ್ಯರನ್ನು ನಮ್ಮ ಜತೆ ಕರೆದೊಯ್ಯುತ್ತಿದ್ದೆವು’ ಎಂದು ಚಾರ್ಲಿಯ ಬಗ್ಗೆ ಮುತುವರ್ಜಿ ವಹಿಸಿದ್ದ ಕುರಿತು ಹೇಳಿಕೊಂಡರು.

    ತಲೆಯೆತ್ತಿದೆ ಚಾರ್ಲಿ ಕಟೌಟ್!

    ರಕ್ಷಿತ್​ಗೆ ಕಾರ್, ಚಾರ್ಲಿಗೆ ಕ್ಯಾರವಾನ್!; 1500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ‘777 ಚಾರ್ಲಿ’ಸಾಮಾನ್ಯವಾಗಿ ಸಿನಿಮಾ ರಿಲೀಸ್ ಸಮಯದಲ್ಲಿ ಆ ಚಿತ್ರದ ನಾಯಕನ ದೊಡ್ಡ ಕಟೌಟ್ ಜತೆ ಅಪರೂಪಕ್ಕೊಮ್ಮೆ ಖಳನಾಯಕ, ನಿರ್ದೇಶಕ ಹಾಗೂ ನಾಯಕಿಯ ಚಿಕ್ಕ ಕಟೌಟ್​ಗಳು ನಿಲ್ಲುತ್ತವೆ. ಆದರೆ ‘777 ಚಾರ್ಲಿ’ ಚಿತ್ರದ ವಿಶೇಷತೆ ಅಂದರೆ, ಚೆನ್ನೈನ ಮಲ್ಟಿಪ್ಲೆಕ್ಸ್ ಒಂದರ ಮುಂದೆ ಚಾರ್ಲಿ ಕಟೌಟ್ ನಿಲ್ಲಿಸಲಾಗಿದೆ. ಅದೇ ರೀತಿ ಹಲವೆಡೆಗಳಲ್ಲಿ ರಕ್ಷಿತ್ ಶೆಟ್ಟಿ ಬದಲು ಚಾರ್ಲಿಯನ್ನೇ ಚಿತ್ರತಂಡ ಪ್ರಚಾರಕ್ಕೆ ಬಳಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts