More

    ಮೊದಲ ಐಟಂ ಸಾಂಗ್​ನಲ್ಲೇ ಸಮಂತಾ ದಾಖಲೆ: ಗ್ಲೋಬಲ್​ ಮ್ಯೂಸಿಕ್​ ವಿಡಿಯೋದಲ್ಲಿ ನಂ 1 ಸ್ಥಾನ

    ಹೈದರಾಬಾದ್​: ನಟ ಅಲ್ಲು ಅರ್ಜುನ್​ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ “ಪುಷ್ಪ” ಬಾಕ್ಸ್​ಆಫೀಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಚಿತ್ರದ ಐಟಂ ಸಾಂಗ್​ನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. “ಹೂಂ ಅಂತೀರಾ – ಊಹೂ ಅಂತೀರಾ” ಹಾಡಿನಲ್ಲಿ ಮೈಚಳಿ ಬಿಟ್ಟು ನಟಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ವಿಶೇಷ ಮ್ಯೂಸಿಕ್​ ಮತ್ತು ಸಾಹಿತ್ಯದಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಐಟಂ ಸಾಂಗ್​ ಇದೀಗ ವಿಶೇಷ ದಾಖಲೆಯೊಂದನ್ನು ಬರೆದಿದೆ.

    ಸಾಂಗ್​ ಬಿಡುಗಡೆಯಾದ ಹಲವು ದಿನಗಳವರೆಗೆ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದ ಸಾಂಗ್​ ಈಗಾಗಲೇ 90 ಮಿಲಿಯನ್​ ವೀಕ್ಷಣೆ ಗಿಟ್ಟಿಸಿಕೊಂಡಿದೆ. ಇದೀಗ ಮತ್ತೊಂದು ದಾಖಲೆ ಬರೆದಿದ್ದು, ಟಾಪ್​ 100 ಗ್ಲೋಬಲ್​ ಮ್ಯೂಸಿಕ್​ ವಿಡಿಯೋದಲ್ಲಿ ಹೂ ಅಂಟಾವ ಸಾಂಗ್​ ನಂಬರ್​ 1 ಸ್ಥಾನದಲ್ಲಿದೆ.

    ಇದೊಂದೆ ಸಾಂಗ್​ ಅಲ್ಲದೆ, ತೆಲುಗು ವರ್ಷನ್​ ಶ್ರೀವಳ್ಳಿ ಸಾಂಗ್​ 22ನೇ ಸ್ಥಾನ, ತಮಿಳು ವರ್ಷನ್​ ಸಾಮಿ ಸಾಮಿ ಸಾಂಗ್​ 25 ನೇ ಸ್ಥಾನ, ಹಿಂದಿ ವರ್ಷನ್​ ಹೂ ಅಂಟಾವ ಸಾಂಗ್​ 42ನೇ ಸ್ಥಾನ, ತೆಲುಗು ವರ್ಷನ್​ ಸಾಮಿ ಸಾಮಿ ಸಾಂಗ್​ 51ನೇ ಸ್ಥಾನ ಪಡೆದುಕೊಂಡು ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ.

    ಪುಷ್ಪ ಚಿತ್ರದಲ್ಲಿ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಾಹಿತ್ಯವನ್ನು ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ. ಈ ಹಾಡಿನಲ್ಲಿ ”ಸೀರೆ ತೊಟ್ಟರು, ಶಾರ್ಟಸ್ ತೊಟ್ಟರು ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು” ಎಂಬ ಸಾಲುಗಳು ಹಾಡಿನ ಆರಂಭದಲ್ಲೇ ಕೇಳಿಬರುತ್ತವೆ. ಜೊತೆಗೆ, ಹಾಡಿನ ಕೋರಸ್ ಸಾಲುಗಳಲ್ಲಿ ಸಹ ”ಗಂಡಸರ ಬುದ್ಧಿಯೇ ನಿಚ” ಎಂಬ ಅರ್ಥವನ್ನು ಮೂರು ಬಾರಿ ಸಾರುತ್ತಿವೆ. ಸದ್ಯ, ಇಂತಹ ಸಾಲುಗಳೆ ಹಲವು ಪುರುಷರ ಕೆಂಗಣ್ಣಿಗೆ ಕಾರಣವಾಗಿದೆ. ಹಾಡನ್ನು ಬ್ಯಾನ್​ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಐಟಂ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಇದಕ್ಕೆ ಬಾಲಿವುಡ್ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. (ಏಜೆನ್ಸೀಸ್​)

    ನಿಮ್ಮ ಟಾರ್ಗೆಟ್​ ನಾವೇ! ಸಮಂತಾ ಐಟಂ ಸಾಂಗ್​ಗೆ ಪುರುಷರ ವರ್ಷನ್​ ಮೂಲಕ ಯುವಕರ ತಿರುಗೇಟು

    500 ರೂ. ನೋಟಿನಲ್ಲಿ ಹಸಿರು ಪಟ್ಟಿಯು ಗಾಂಧಿ ಫೋಟೋ ಬಳಿಯಿದ್ದರೆ ಅದು ನಕಲಿನಾ? ಇಲ್ಲಿದೆ ನಿಜಾಂಶ!

    VIDEO: ಹಾವನ್ನು ಮೈಮೇಲೆ ಬಿಟ್ಕೊಂಡು ಹಾಡು ಹೇಳಿದ ಗಾಯಕಿ: ಕೆನ್ನೆಗೆ ‘ಮುತ್ತಿಟ್ಟು’ ಬೆಚ್ಚಿಬೀಳಿಸಿದ ಉರಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts